ಚಿನ್ನ, ಬೆಳ್ಳಿ ಬೆಲೆ ಹೆಚ್ಚಳ ಮುಂದುವರಿಕೆ
ಮುಂಬೈ, 16 ಏಪ್ರಿಲ್ (ಹಿ.ಸ):ಆ್ಯಂಕರ್:ಏಪ್ರಿಲ್ 16: ಅನಿಶ್ಚಿತ ವಾತಾವರಣದ ಮಧ್ಯೆ ಚಿನ್ನ ಮತ್ತು ಬೆಳ್ಳಿಗಳಿಗೆ ಬೇಡಿಕ
Gold Prices April 16th 2024, Gold, Silver Rates 


ಮುಂಬೈ, 16 ಏಪ್ರಿಲ್ (ಹಿ.ಸ):ಆ್ಯಂಕರ್:ಏಪ್ರಿಲ್ 16: ಅನಿಶ್ಚಿತ ವಾತಾವರಣದ ಮಧ್ಯೆ ಚಿನ್ನ ಮತ್ತು ಬೆಳ್ಳಿಗಳಿಗೆ ಬೇಡಿಕೆ ಮುಂದುವರಿದೆ. ಚಿನ್ನದ ಬೆಲೆ ಗ್ರಾಮ್ಗೆ 65 ರೂನಷ್ಟು ಏರಿದೆ. ಮಾರ್ಚ್ನಿಂದ ಈಚೆಗೆ 47 ದಿನದಲ್ಲಿ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 57,590 ರೂನಿಂದ 67,050 ರೂಗೆ ಏರಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಗ್ರಾಮ್ಗೆ 1,000 ರೂ ಸಮೀಪದಷ್ಟು ಬೆಲೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ ಕೂಡ ಹಿಂದೆಂದಿಗಿಂತಲೂ ವೇಗವಾಗಿ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 67,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,465 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 16ಕ್ಕೆ)

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,050 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,150 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,050 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,150 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 846.5 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಬೆಂಗಳೂರು: 67,050 ರೂ

ಚೆನ್ನೈ: 67,900 ರೂ

ಮುಂಬೈ: 67,050 ರೂ

ದೆಹಲಿ: 67,200 ರೂ

ಕೋಲ್ಕತಾ: 67,050 ರೂ

ಕೇರಳ: 67,050 ರೂ

ಅಹ್ಮದಾಬಾದ್: 67,100 ರೂ

ಜೈಪುರ್: 67,200 ರೂ

ಲಕ್ನೋ: 67,200 ರೂ

ಭುವನೇಶ್ವರ್: 67,050 ರೂ

ಹಿಂದೂಸ್ತಾನ್ ಸಮಾಚಾರ್


 rajesh pande