ಇಸ್ರೇಲ್-ಇರಾನ್ ಯುದ್ಧಭೀತಿ: ಆರ್ಥಿಕತೆ ಮೇಲೆ ಅಪಾಯ
ನವದೆಹಲಿ, 15 ಏಪ್ರಿಲ್ (ಹಿ.ಸ):ಆ್ಯಂಕರ್:ಇಸ್ರೇಲ್ ದೇಶದ ಮೇಲೆ ಇರಾನ್ ಡ್ರೋನ್ ಮತ್ತು ಮಿಸೈಲ್ಗಳಿಂದ ದಾಳಿ ನಡೆಸಿದೆ.
ಕರಪ


ನವದೆಹಲಿ, 15 ಏಪ್ರಿಲ್ (ಹಿ.ಸ):ಆ್ಯಂಕರ್:ಇಸ್ರೇಲ್ ದೇಶದ ಮೇಲೆ ಇರಾನ್ ಡ್ರೋನ್ ಮತ್ತು ಮಿಸೈಲ್ಗಳಿಂದ ದಾಳಿ ನಡೆಸಿದೆ. ಸಿರಿಯಾದಲ್ಲಿರುವ ಇರಾನ್ ರಾಜತಾಂತ್ರಿಕ ಕಚೇರಿ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಕಾರ್ಯಾಚರಣೆ ನಡೆಸಿದೆ. ಇಸ್ರೇಲ್ ಈಗ ಪ್ರತಿದಾಳಿ ನಡೆಸಿದ್ದೇ ಆದಲ್ಲಿ ಎರಡೂ ದೇಶಗಳ ಮಧ್ಯೆ ಪೂರ್ಣಪ್ರಮಾಣದ ಯುದ್ಧ ಸಂಭವಿಸುವ ಭೀತಿ ಇದೆ. ಇವತ್ತಿನ ಸೂಕ್ಷ್ಮ ಕಾಲಘಟ್ಟದಲ್ಲಿ ಯುದ್ಧ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ. ಷೇರು ಮಾರುಕಟ್ಟೆ, ಚಿನ್ನ ಇತ್ಯಾದಿಗಳು ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುತ್ತವೆ. ಆರ್ಥಿಕವಾಗಿ ಭಾರತವೂ ಒಳಗೊಂಡಂತೆ ವಿವಿಧ ದೇಶಗಳಲ್ಲಿ ಪರಿಣಾಮ ಬೀರುವ ಅಪಾಯ ಉಂಟು. ಉಕ್ರೇನ್ ರಷ್ಯಾ ಯುದ್ಧದಿಂದ ಈಗಲೂ ಜಗತ್ತು ಸೊರಗುತ್ತಲೇ ಇದೆ.

ಇಸ್ರೇಲ್-ಇರಾನ್ ಯುದ್ಧದಿಂದ ಪೆಟ್ರೋಲ್ ಮೇಲೆ ಪರಿಣಾಮ

ಇಸ್ರೇಲ್-ಇರಾನ್ ಯುದ್ಧದ ಕಾರ್ಮೋಡ ಕವಿದಿರುವುದು ಗಲ್ಫ್ ರಾಷ್ಟ್ರಗಳಲ್ಲಿ. ಇರಾನ್ ಪ್ರಮುಖ ಪೆಟ್ರೋಲಿಯಂ ದೇಶ. ಪೂರ್ಣ ಯುದ್ಧ ಆರಂಭವಾದರೆ ಇತರ ತೈಲ ರಾಷ್ಟ್ರಗಳೂ ಭಾಗಿಯಾಗಬಹುದು. ಅದೇನೇ ಆದರೂ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 90 ಡಾಲರ್ ಇದ್ದದ್ದು ಬಹಳ ಶೀಘ್ರದಲ್ಲಿ 100 ಡಾಲರ್ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. ಇದಾದರೆ ಪೆಟ್ರೋಲ್, ಡೀಸಲ್ ಬೆಲೆಗಳೂ ಏರಲಿವೆ.

ಹಣದುಬ್ಬರ ಹೆಚ್ಚುವ ಸಾಧ್ಯತೆ

ಪೆಟ್ರೋಲ್ ಬೆಲೆ ಹೆಚ್ಚಾದರೆ ಸಹಜವಾಗಿ ವಿವಿಧ ವಸ್ತುಗಳ ಬೆಲೆ ಏರಿಕೆ ಆಗಬಹುದು. ಅದರ ಪರಿಣಾಮವಾಗಿ ಹಣದುಬ್ಬರ ಹೆಚ್ಚುವ ಸಾಧ್ಯತೆ ಇರುತ್ತದೆ. ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಹಿಂದೂಸ್ತಾನ್ ಸಮಾಚಾರ್


 rajesh pande