ಪಬ್ ನ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು
ಚೆನ್ನೈ, 29 ಮಾರ್ಚ್ (ಹಿ.ಸ): ಆ್ಯಂಕರ್:ಪಬ್ ವೊಂದನ್ನು ನವೀಕರಣ ಮಾಡುತ್ತಿದ್ದಾಗ ಕಟ್ಟಡದ ಮೊದಲ ಮಹಡಿಯ ಕಾಂಕ್ರೀಟ್ ಸೀಲಿ
ಪಬ್ ನ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವು


ಚೆನ್ನೈ, 29 ಮಾರ್ಚ್ (ಹಿ.ಸ):

ಆ್ಯಂಕರ್:ಪಬ್ ವೊಂದನ್ನು ನವೀಕರಣ ಮಾಡುತ್ತಿದ್ದಾಗ ಕಟ್ಟಡದ ಮೊದಲ ಮಹಡಿಯ ಕಾಂಕ್ರೀಟ್ ಸೀಲಿಂಗ್ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಚೆನ್ನೈನ ಅಲ್ವಾರ್ ಪೇಟ್ ನಲ್ಲಿ ನಡೆದಿದೆ.

ಮ್ಯಾಕ್ಸ್ (22), ಲಾಲಿ (24) ಹಾಗೂ ಸೈಕ್ಲೋನ್ ರಾಜ್ (48) ಮೃತಪಟ್ಟವರು. ಚೆನ್ನೈನ ಅಲ್ವಾರ್ ಪೇಟ್ ಪ್ರದೇಶದ ಚೇಮಿಯರ್ಸ್ ರಸ್ತೆಯಲ್ಲಿರುವ ಸೆಖ್ ಮೆಟ್ ಕ್ಲಬ್ನಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಮೂವರು ಅದೇ ಕ್ಲಬ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದಾರೆ.

ಇಬ್ಬರು ಕಾರ್ಮಿಕರು ಮಣಿಪುರದವರು ಮತ್ತೊಬ್ಬ ಚೆನ್ನೈ ಮೂಲದವನು ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande