ಶಿವರಾಜ್‍ ಕುಮಾರ್ ಸಿನಿಮಾ ನಿಷೇಧಿಸಲು ಸಾಧ್ಯವಿಲ್ಲ : ಚುನಾವಣಾ ಆಯೋಗ
ಬೆಂಗಳೂರು, 28 ಮಾರ್ಚ್ (ಹಿ.ಸ):ಆ್ಯಂಕರ್:ಸಿನಿಮಾ ಥಿಯೇಟರ್ಗಳು ಹಾಗೂ ಖಾಸಗಿ ಟಿವಿ ಚಾನೆಲ್ಗಳಲ್ಲಿ ನಟ ಶಿವರಾಜ್ಕುಮಾರ್ ಅ
ನಟ ಶಿವರಾಜ್‍ಕುಮಾರ್


ಬೆಂಗಳೂರು, 28 ಮಾರ್ಚ್ (ಹಿ.ಸ):ಆ್ಯಂಕರ್:ಸಿನಿಮಾ ಥಿಯೇಟರ್ಗಳು ಹಾಗೂ ಖಾಸಗಿ ಟಿವಿ ಚಾನೆಲ್ಗಳಲ್ಲಿ ನಟ ಶಿವರಾಜ್‍ ಕುಮಾರ್ ಅವರ ಸಿನಿಮಾ ಹಾಗೂ ಜಾಹೀರಾತುಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೇಳಿದೆ.

ಸರ್ಕಾರಿ ಒಡೆತನದ ದೂರದರ್ಶನ ಹಾಗೂ ಡಿಡಿ ಚಂದನದಲ್ಲಿ ಮಾತ್ರ ಶಿವರಾಜ್ಕುಮಾರ್ ಅವರ ಸಿನಿಮಾ ಪ್ರಸಾರವನ್ನು ನಿರ್ಬಂಧಿಸಬಹುದು ಎಂದಿದೆ. ನಟ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಅವಧಿಯಲ್ಲಿ ಅವರ ಸಿನಿಮಾ ಮತ್ತು ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್ ರಘು ಕೌಟಿಲ್ಯ ದೂರು ನೀಡಿದ್ದರು.

ಜನಪ್ರಿಯ ಸಿನಿಮಾ ನಟ ಆಗಿರುವ ಕಾರಣ ಶಿವರಾಜ್‍ ಕುಮಾರ್ ಅವರು ಜನರ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಅವರ ಸಿನಿಮಾ ಪ್ರಸಾರಕ್ಕೆ ತಡೆ ನೀಡಬೇಕು ಎಂದು ದೂರು ನೀಡಿದ್ದರು. ಬಿಜೆಪಿ ಮುಖಂಡ ನೀಡಿದ್ದ ದೂರಿಗೆ ಪ್ರತಿಯಾಗಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.

ಚುನಾವಣೆಗೆ ಸ್ರ್ಪಧಿಸುವ ನಟರು ಇರುವ ಸಿನಿಮಾಗಳು ಮತ್ತು ಜಾಹೀರಾತುಗಳ ಪ್ರಸಾರವನ್ನು ಖಾಸಗಿ ಟಿವಿ ಚಾನೆಲ್ಗಳು ಅಥವಾ ಚಿತ್ರಮಂದಿರಗಳಲ್ಲಿ ನಿರ್ಬಂಧಿಸಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತನ್ನ ನಿರ್ದೇಶನದಲ್ಲಿ ನೀಡಿದೆ. ಅದೇ ಅಂಶವನ್ನು ರಾಜ್ಯ ಚುನಾವಣಾ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ಡಿಡಿ ಚಂದನದಲ್ಲಿ ಚಲನಚಿತ್ರಗಳ ಪ್ರಸಾರವನ್ನು ನಿರ್ಬಂಧಿಸಬಹುದು ಎಂದು ಹೇಳಿದ್ದು, ಜಾಹೀರಾತುಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande