ಅಂಬೇಡ್ಕರ್ ಆಶಯದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಸಿ.ವಿ.ಚಂದ್ರಶೇಖರ್
ಕೊಪ್ಪಳ, 28 ಏಪ್ರಿಲ್ (ಹಿ.ಸ) : ಆ್ಯಂಕರ್ : ತಾಲ್ಲೂಕಿನ ಗುಡದಳ್ಳಿ ಗ್ರಾಮದಲ್ಲಿ ಭಾರತ ರತ್ನ ಬೀ. ಆರ್.ಅಂಬೇಡ್ಕರ್ ರವ
೪೧ ಜೋಡಿ ಸಾಮೂಹಿಕ ವಿವಾಹ ಸಮಾರಂಭ


ಕೊಪ್ಪಳ, 28 ಏಪ್ರಿಲ್ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ಗುಡದಳ್ಳಿ ಗ್ರಾಮದಲ್ಲಿ ಭಾರತ ರತ್ನ ಬೀ. ಆರ್.ಅಂಬೇಡ್ಕರ್ ರವರ ೧೩೩ ನೆಯ ಜಯಂತಿ ನಿಮಿತ್ತ ೪೧ ಜೋಡಿ ಸಾಮೂಹಿಕ ವಿವಾಹ ಸಮಾರಂಭ ಭಾನುವಾರ ಜರುಗಿತು.

ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೇ .ಡಿ .ಎಸ್ ರಾಜ್ಯ ಮುಖಂಡ ಸಿ.ವಿ.ಚಂದ್ರ ಶೇಖರ ಮಾತನಾಡಿ, ಇಂದಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳನ್ನು ಮಾಡುವುದು ಪುಣ್ಯದ ಕೆಲಸ, ಇಂಥ ಚಟುವಟಿಕೆಗಳು ನಿರಂತರ ವಿರಲಿ, ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ರವರ ಜಯಂತಿ ನೆಪದಲ್ಲಿ ಇಂಥ ಚಟುವಟಿಕೆಗಳು ಇತರರಿಗೆ ಮಾದರಿಯಾಗಿದೆ, ಬರುವ ದಿನಗಳಲ್ಲಿ ನವ ದಂಪತಿಗಳು ಆದಶ೯ ಜೀವನ ನಡೆಸುತ್ತಾ ಹೆತ್ತವರಿಗೆ ಗೌರವ ಮಮತೆಯಿಂದ ಜೋಪಾನ ಮಾಡಿರಿ, ಮಕ್ಕಳಿಗೆ ವಿದ್ಯೆ ಕಲಿಸಿ ಆದಶ೯ ಪ್ರಜೆಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಆಯೋಜಕ ಗುಡದಪ್ಪ ದೊಡ್ಡಮನಿ ಮಾತನಾಡಿ, ಕಳೆದ ೨೦ ವರುಷಗಳಿಂದ ಸಣ್ಣ ಗ್ರಾಮದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳುತ್ತ ಬಂದಿದೆ, ಹಿಂದೆ ನಮ್ಮ ತಂದೆಯವರ ಕಾಲದಲ್ಲಿ ಮದುವೆ ಆಗಬೇಕೆಂದರೆ ಉಳ್ಳವರ ಮನೆಯಲ್ಲಿ ಜೀತ ಪದ್ಧತಿ ಒಳಗಾಗುವ ಕಷ್ಟ ಕಾಲವನ್ನು ಗಮನಿಸಿ ಊರಿನ ಯುವಕರು ಚಿಂತನೆ ಮಾಡಿ ಹಿರಿಯರು ಅನುಭವಿಸಿದ ಕಷ್ಟ ನಮ್ಮ ಯುವಕರಿಗೆ ಬರಬಾರದು ಎಂದು ಭಾವಿಸಿ ಪ್ರತಿ ವರುಷ ಕೆಂಚಮ್ಮ ದೇವಿ ಸನ್ನಿಧಾನದಲ್ಲಿ ವಿವಾಹ ನೆರವೇರಿವೆ, ಕಳೆದ ವರ್ಷ ನೇತ್ರದಾನ ಶಿಬಿರ ಇತ್ತು ಈ ಬಾರಿ ವಧುವರರಿಗೆ ಸಂವಿಧಾನ ಪೀಠಿಕೆ ಫಲಕ ವಿತರಣೆ ಮಾಡಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಹೆಬ್ಬಾಳದ ಶ್ರೀ ನಾಗಭೂಷಣ ಶ್ರೀಗಳು, ಹಂಪಿ ಮಾತಂಗ ಪೀಠದ ಸ್ವಾಮೀಜಿ ,ಮುಖಂಡರಾದ ಯಮನಪ್ಪ ಕುಕನೂರು, ಡಿ.ಎಸ್.ಎಸ್.ಮುಖಂಡರಾದ ಜಿ.ಎಂ.ಗೊರವರ, ಮಲ್ಲು ಪೂಜಾರ್, ನಿಂಗಜ್ಜ ಶಹಪುರ, ಮರಿಯಪ್ಪ ಹರಿಜನ, ಕೃಷ್ಣಪ್ಪ, ಗಾಳೆಪ್ಪ , ಲಕ್ಷ್ಮಣ, ಸಂಜೀವಪ್ಪ ಮೊದಲಾದವರು ಇದ್ದರು. ಫಕೀರಪ್ಪ ಗುಳ ದಳ್ಳಿ ಕಲಾ ತಂಡದಿಂದ ಕ್ರಾಂತಿಗೀತೆಗಳು ಜರುಗಿದವು.

ಹಿಂದೂಸ್ತಾನ್ ಸಮಾಚಾರ್


 rajesh pande