ಬೆಂಗಳೂರು, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಕುಚಿತ ನೈಸರ್ಗಿಕ ಅನಿಲ ಪರಿಸರ ಪೂರಕ, ಮೈಲಿದೂರ
ಹೆಚ್ಚು ಎಂದು ಪ್ರಚಾರ ಮಾಡಿದ್ದರೂ ಅದರ ಪೂರೈಕೆಯ ಕೊರತೆಯ ಕಾರಣ ಸಿ.ಎನ್.ಜಿ ಆಧಾರಿತ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೇ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಉಂಟಾಗಿದೆ.
ರಾಜ್ಯದ ಹಲವು ಜಿಲ್ಲೆಯಲ್ಲಿ ಸಿಎನ್‌ಜಿ ಬಂಕ್‌ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ ನಿರ್ಮಾಣ ವಾಗಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕಕ್ಕೆ ನಿರಂತರ ಸಿಎನ್‌ಜಿ ಪೂರೈಕೆಗೆ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯದ ಆಟೋ ಚಾಲಕರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ದುಡಿಯುವ ಸಮಯವನ್ನು ಇಂಧನ ತುಂಬಿಸುವ ಸಲುವಾಗಿ ಬಂಕ್‌ಗಳ ಮುಂದೆ ಸುಮಾರು 3 ರಿಂದ 4 ಗಂಟೆ ಸರತಿ ಸಾಲಿನಲ್ಲಿ ವ್ಯರ್ಥ ನಿಲ್ಲಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಸಿಎನ್ ಗ್ಯಾಸ್ ಕೊರತೆಯಿಂದ ಅಟೋ ಚಾಲಕಾರು ತಮ್ಮ ರಿಕ್ಷಾದೊಂದಿಗೆ ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ಕಾಯ ಬೇಕಾಗಿದೆ. ದಿನದ ದುಡಿಮೆ ಮಾಡುವ ಸಮಯದಲ್ಲಿ ಹಗಲು ರಾತ್ರಿಯೂ ಸರತಿಯಲ್ಲಿ ನಿಂತು ಕಾಯುವಂತಾಗಿದೆ. ಇದರಿಂದ ದಿನವಿಡೀ ದುಡಿಯುವ ರಿಕ್ಷಾ
ಚಾಲಕರಿಗೆ ಬದುಕು ನಡೆಸಲು, ಬ್ಯಾಕ್ ಸಾಲ ಪಾವತಿಸಲು ತುಂಬಾ ಕಷ್ಟಕರ ಆಗಿದೆ .ಇದರಿಂದ ದುಡಿಮೆಯೇ ಎರಡು ದಿನಕ್ಕೊಮ್ಮೆ ಎಂಬಂತಾಗಿದೆ ಎಂದು ರಿಕ್ಷಾ ಚಾಲಕರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್