ಬಳ್ಳಾರಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ಪಟ್ಟಣದ ಸುದೀಕ್ಷಾ ಇಂಟರ್‍ನ್ಯಾಷನಲ್ ಶಾಲೆಯ ಪ್ರಾಯೋಜಕತ್ವದಲ್ಲಿ ಕಲ್ಯಾಣ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಡಿಸೆಂಬರ್ 14 ಮತ್ತು 15ರಂದು ಸಿರುಗುಪ್ಪದಲ್ಲಿ ಸ್ಕೇಟಿಂಗ್ ಪಂದ್ಯಾವಳಿಗಳು ನಡೆಯಲಿವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸಿ.ಎಂ. ಶಿವಪ್ರಕಾಶ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಬಾಲಕರು-ಬಾಲಕಿಯರು ಭಾಗವಹಿಸಲಿದ್ದಾರೆ. ಟೆನ ಸಿಟಿ, ಟಾಯ್, ಇನ್ ಲೈನ್, ಕ್ವಾಡ್, ವಿಭಾಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಇನ್‍ಲೈನ್ಸ್ ಸ್ಕೇಟಿಂಗ್ 200 ಮೀಟರ್, 500 ಮೀಟರ್ ಮತ್ತು ಅದಕ್ಕೂ ಹೆಚ್ಚಿನ ವಿಭಾಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರು.
ಪಂದ್ಯಾವಳಿ ನಡೆಯುವ ಸ್ಕೇಟಿಂಗ್ ಅಂಕಣವನ್ನು (ರಿಂಕ್) ಸ್ಕೇಟಿಂಗ್ ಅಸೋಸಿಯೇಷನ್‍ನ ಕಾರ್ಯದರ್ಶಿ, ಸ್ಕೇಟಿಂಗ್ ಲೆಜೆಂಡ್ ಪಿ.ಕೆ. ಭರತ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸುದೀಕ್ಷಾ ಶಾಲೆಯ ಆಡಳಿತ ಮಂಡಳಿಯವರು ವ್ಯವಸ್ಥೆ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶರಣಯ್ಯ, ಶ್ರೀನಿವಾಸಲು, ಸುದೀಕ್ಷಾ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಸಪ್ನಾ, ಸೋಮಶೇಖರ್ ಸರವಣ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್