ಬಾಂಗ್ಲಾದೇಶಕ್ಕೆ ವಿದೇಶಾಂಗ ಕಾರ್ಯದರ್ಶಿ
ನವದೆಹಲಿ, 0 9 ಡಿಸೆಂಬರ್ (ಹಿ.ಸ.): ಆ್ಯಂಕರ್ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಇದು ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಢಾಕಾಕ್ಕೆ ಮೊದಲ ಉನ್ನತ ಮಟ್ಟದ ಭೇಟಿಯಾಗಿದೆ. ಮಿಸ್ರಿ ಅವರು ಢಾಕಾದಲ್ಲಿ ವಿದೇ
Foreign Secretary Vikram Misri will visit Bangladesh today to lead


ನವದೆಹಲಿ, 0 9 ಡಿಸೆಂಬರ್ (ಹಿ.ಸ.):

ಆ್ಯಂಕರ್ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಇದು ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಢಾಕಾಕ್ಕೆ ಮೊದಲ ಉನ್ನತ ಮಟ್ಟದ ಭೇಟಿಯಾಗಿದೆ.

ಮಿಸ್ರಿ ಅವರು ಢಾಕಾದಲ್ಲಿ ವಿದೇಶಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧಿರ್ ಜೈಸ್ವಾಲ್ ತಿಳಿಸಿದ್ದಾರೆ. ಈ ವೇಳೆ ಮಿಸ್ರಿ ಅವರು, ಬಾಂಗ್ಲಾದೇಶದ ತಮ್ಮ ಸಹವರ್ತಿಯೊಂದಿಗೆ ಚರ್ಚೆ ನಡೆಸಲಿದ್ದಾರೆ.

ಈ ಭೇಟಿಯು ಉಭಯ ದೇಶಗಳ ನಡುವೆ ಇತ್ತೀಚಿಗೆ ಮೂಡಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದುಗಳ ಮೇಲೆ ನಡೆದ ಹಲ್ಲೆಗಳು ಮತ್ತು ಇತರ ಅಪರಾಧಗಳು ಹೆಚ್ಚಾಗಿವೆ. ಭಾರತ ಹಿಂದೂಗಳ ಮೇಲಿನ ಅಪರಾಧ ಪ್ರಕರಣದಲ್ಲಿ ನ್ಯಾಯಸಮ್ಮತ, ಹಾಗೂ ಪಾರದರ್ಶಕ ಕಾನೂನು ಪ್ರಕ್ರಿಯೆಯನ್ನು ನಿರೀಕ್ಷಿಸುತ್ತದೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande