ತೋರಣಗಲ್ಲು : ತಾಯಿ ಮಗು ಕಾಣೆ 
ತೋರಣಗಲ್ಲು, 07 ಡಿಸೆಂಬರ್ (ಹಿ.ಸ.) : ಆ್ಯಂಕರ್: ತೋರಣಗಲ್ಲು ಗ್ರಾಮದ ಕೆ.ಪುಷ್ಪಾ(26) ಹಾಗೂ ಮಗ ವಿಶಾಲ್(06 ) ನ.21 ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್-ಇನ್ಸ್‍ಪೆಕ್ಟರ್ ಆಫ್ ಪೊಲೀಸ್ ಅವರು ತಿಳಿಸಿದ್ದಾರೆ. ತಾಯಿಯ ಚಹರೆ: ಎತ್ತರ 5.1 ಅಡಿ,
ತೋರಣಗಲ್ಲು : ತಾಯಿ ಮಗು ಕಾಣೆ


ತೋರಣಗಲ್ಲು, 07 ಡಿಸೆಂಬರ್ (ಹಿ.ಸ.) :

ಆ್ಯಂಕರ್: ತೋರಣಗಲ್ಲು ಗ್ರಾಮದ ಕೆ.ಪುಷ್ಪಾ(26) ಹಾಗೂ ಮಗ ವಿಶಾಲ್(06 ) ನ.21 ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್-ಇನ್ಸ್‍ಪೆಕ್ಟರ್ ಆಫ್ ಪೊಲೀಸ್ ಅವರು ತಿಳಿಸಿದ್ದಾರೆ.

ತಾಯಿಯ ಚಹರೆ:

ಎತ್ತರ 5.1 ಅಡಿ, ಕೋಲುಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಸೀರೆ, ಕಪ್ಪು ಬಣ್ಣದ ಕುಬಸ ಕುಪ್ಪಸ ಧರಿಸಿರುತ್ತಾರೆ ಹಾಗೂ ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.

ಮಗುವಿನ ಚಹರೆ:

ಎತ್ತರ 3.1 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಕಾಣೆಯಾದ ಸಂದರ್ಭದಲ್ಲಿ ಹರಿಶಿಣ ಬಣ್ಣದ ಗೆರೆಗಳುಳ್ಳ ಶರ್ಟ್ ಮತ್ತು ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.

ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ತಾಯಿ ಹಾಗೂ ಮಗುವಿನ ಬಗ್ಗೆ ಮಾಹಿತಿ ದೊರೆತಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ:08395-250100 ಅಥವಾ ಪಿಎಸ್‍ಐ ಮೊ:9480803062 ಗೆ ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande