ಬಳ್ಳಾರಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಚಿನ್ (ಜಿ.ಬಿ.ಆರ್. ಕಾಲೇಜು, ಹೂವಿನಹಡಗಲಿ) ಅವರು ಒಡಿಸ್ಸಾದ ಕಳಿಂಗ ವಿಶ್ವವಿದ್ಯಾಲಯ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷÀ ಮತ್ತು ಮಹಿಳೆಯರ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಹ್ಯಾಮರ್ ಥ್ರೊದಲ್ಲಿ ಖೆಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2025 ಕ್ಕೆ ಅರ್ಹತೆ ಪಡೆದಿದ್ದಾರೆ.
ಕ್ರೀಡಾಪಟುವಿನ ಸಾಧನೆಗೆ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು ಮೌಲ್ಯಮಾಪನ, ಹಣಕಾಸು ಅಧಿಕಾರಿಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಅಥ್ಲೆಟಿಕ್ಸ್ ತಂಡದ ವ್ಯವಸ್ಥಾಪಕರು ಮತ್ತು ತರಬೇತುದಾರರಾದ ಡಾ.ಶಶಿಧರ ಕೆಲ್ಲೂರ ಮತ್ತು ಬಡೇಸಾಬ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಸಚಿನ್‍ಗೆ ಶುಭ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್