ನ್ಯೂಯಾರ್ಕ್, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಫಿಡೆ ವಿಶ್ವ ಬ್ಲಿಟ್ಸ್ ಚೆಸ್ ಚಾಂಪಿಯನ್‌ಶಿಪ್ ಹಾಗೂ ಮಹಿಳಾ ವಿಶ್ವ ಬ್ಲಿಟ್ಸ್ ಚೆಸ್ ಚಾಂಪಿಯನ್‌ಶಿಪ್‌ಗೆ ನ್ಯೂಯಾರ್ಕ್‌ನಲ್ಲಿ ಇಂದು ಚಾಲನೆ ದೊರೆಯಲಿದೆ.
ಇತ್ತೀಚೆಗೆ ವಸ್ತ್ರ ಸಂಹಿತೆ ಉಲ್ಲಂಘನೆಗೆ ಟೂರ್ನಿಯಿಂದ ಹೊರಬಿದ್ದಿದ್ದ ವಿಶ್ವ ನಂ.-೧ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲಸನ್ ಟೂರ್ನಿಗೆ ಮರಳಿದ್ದಾರೆ. ಈ ಕುರಿತು ಫಿಡೆ ಅಧ್ಯಕ್ಷ ಅರ್ಕಾಡಿ ವರ್ಕೋವಿಚ್ ನಿನ್ನೆ ಮಾಹಿತಿ ನೀಡಿದ್ದಾರೆ.
ಫಿಡೆ ವಿಶ್ವ ಬ್ಲಿಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್‌ಗಳಾದ ಅರ್ಜುನ್ ಎರಿಗೈಸಿ ಹಾಗೂ ಆರ್. ಪ್ರಜ್ಞಾನಂದ ಸ್ಪರ್ಧಿಸಲಿದ್ದು, ತಮ್ಮ ೨ನೇ ವರ್ಲ್ಡ್ ರ್‍ಯಾಪಿಡ್ ಚೆಸ್ ಚಾಂಪಿಯನ್ ಶಿಪ್ ಗೆದ್ದಿರುವ ಕೊನೆರು ಹಂಪಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ