ಕೋಲಾರ , ಡಿಸೆಂಬರ್ ೨೮ (ಹಿ.ಸ.) ಆಂಕರ್ : ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು ದಿನಾಂಕ ೨೬ನೇ ಡಿಸೆಂಬರ್ ರಂದು ನಿಧನರಾದ ಪ್ರಯುಕ್ತ ರಾಜ್ಯ ಸರ್ಕಾರವು ೨೬ನೇ ಡಿಸೆಂಬರ್ ನಿಂದ ಜನವರಿ ೧ರ ವರೆಗೆ ಶೋಕಾಚರಣೆ ಆಚರಣೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಆಯೋಜಿಸಲಾಗಿದ್ದ ದಿನಾಂಕ ೨೯ನೇ ಡಿಸೆಂಬರ್ ರಂದು ವಿಶ್ವ ಮಾನವದಿನಾಚರಣೆ, ೩೧ನೇ ಡಿಸೆಂಬರ್ ರಂದು ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಬದುಕು ಮತ್ತು ಬರಹ ಕುರಿತು ಜಿಲ್ಲಾ ಮಟ್ಟದ ಅಂತರ ಕಾಲೇಜು ಭಾಷಣ ಸ್ಪರ್ಧೆ ಹಾಗೂ ೧ನೇ ಜನವರಿ ಯಂದು ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್