ಧಾರವಾಡ:ಮಾರ್ಚ 8ರಂದು ರಾಷ್ಟ್ರೀಯ ಲೋಕ ಅದಲಾತ್
ಧಾರವಾಡ, 29 ಡಿಸೆಂಬರ್ (ಹಿ.ಸ.): ಆ್ಯಂಕರ್: ಕಾನೂನು ಸೇವೆಗಳ ರಾಷ್ಟ್ರೀಯ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ 8, 2025 ರಂದು ದೇಶದಾದ್ಯಂತ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್, ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿದ ಅರ್ಜಿಗಳನ್ನು, ಬ್ಯಾಂಕ
ಧಾರವಾಡ:ಮಾರ್ಚ 8ರಂದು ರಾಷ್ಟ್ರೀಯ ಲೋಕ ಅದಲಾತ್


ಧಾರವಾಡ, 29 ಡಿಸೆಂಬರ್ (ಹಿ.ಸ.):

ಆ್ಯಂಕರ್:

ಕಾನೂನು ಸೇವೆಗಳ ರಾಷ್ಟ್ರೀಯ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ 8, 2025 ರಂದು ದೇಶದಾದ್ಯಂತ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್, ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿದ ಅರ್ಜಿಗಳನ್ನು, ಬ್ಯಾಂಕ್, ಸಹಕಾರಿ ಸಂಘ, ಖಾಸಗಿ ಇತ್ಯಾದಿ ವ್ಯಕ್ತಿಗಳ ಸಲ್ಲಿಸಿರುವ ಚೆಕ್ ಅಮಾನ್ಯ ಪ್ರಕರಣಗಳು, ಜೀವನಾಂಶ, ಕೌಟುಂಬಿಕ ವ್ಯಾಜ್ಯಗಳು, ಖಾಯಂ ಜನತಾ ನ್ಯಾಯಾಲಯದಲ್ಲಿರುವ ಪ್ರಕರಣಗಳು, ಚೌದ್ಯೋಗಿಕ ನ್ಯಾಯಮಂಡಳಿ, ಕಾರ್ಮಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಲೋಕ ಅದಾಲತ್‌ನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ಧಾರವಾಡ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande