ಕೋಲಾರ, ಡಿಸೆಂಬರ್ 28 (ಹಿ.ಸ) ಆಂಕರ್ : ಸೃಜನ ಲಲಿತಕಲಾ ವೇದಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಕೊಡುವ ಕರುನಾಡ ಕಣ್ಮಣಿ ಪ್ರಶಸ್ತಿಗೆ ಜಿಲ್ಲೆಯ ಸುಗಟೂರು ಗ್ರಾಮದ ಅಂತರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಮುಂಬರುವ ವರ್ಷದ ಜನವರಿ ೧೨ ರಂದು ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡಿದ ಗಣ್ಯರಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದು ಇವರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಲನಚಿತ್ರ ನಟ ಚರಣ್ ರಾಜ್, ಸಾಹಿತ್ಯ ಡಾ.ಕಾ.ವೆಂ ಶ್ರೀನಿವಾಸಮೂರ್ತಿ, ವೃತ್ತಿಪರ ಪ್ರಿಯದರ್ಶಿನಿ ಸಾನಿಕೊಪ್ಪ, ನೃತ್ಯ ಮನು, ಲಘು ಸಂಗೀತ ಜನಕ್ ಮದಾನ್, ಸೇರಿದಂತೆ ಮುಂತಾದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಚಿತ್ರ : ಜಾನಪದ ಗಾಯಕ ಗೋ.ನಾ.ಸ್ವಾಮಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್