ದೇಶದ ಎಲ್ಲೆಡೆ ವಿಶ್ವ ಧ್ಯಾನ ದಿನ ಆಚರಣೆ
ನವದೆಹಲಿ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇಂದು ವಿಶ್ವ ಧ್ಯಾನ ದಿನ. ಧ್ಯಾನವು ಮಾನಸಿಕ ಆರೋಗ್ಯ ಹಾಗೂ ದೈಹಿಕ ಸದೃಢತೆಗೆ ಕೊಡುಗೆ ನೀಡುತ್ತದೆ. ಧ್ಯಾನದ ಮಹತ್ವವನ್ನು ಗುರುತಿಸಿದ ವಿಶ್ವಸಂಸ್ಥೆಯು ಡಿಸೆಂಬರ್ 21 ರಂದು ವಿಶ್ವ ಧ್ಯಾನ ದಿನವೆಂದು ಘೋಷಿಸಿದೆ. ಪ್ರತಿ ವರ್ಷ ಈ ದಿನವನ್ನು ಧ್ಯಾನ ದಿನ ಎಂ
ಇಂದು ವಿಶ್ವ ಧ್ಯಾನ ದಿನ. ಧ್ಯಾನವು ಮಾನಸಿಕ ಆರೋಗ್ಯ ಹಾಗೂ ದೈಹಿಕ ಸದೃಢತೆಗೆ ಕೊಡುಗೆ ನೀಡುತ್ತದೆ. ಧ್ಯಾನದ ಮಹತ್ವವನ್ನು ಗುರುತಿಸಿದ ವಿಶ್ವಸಂಸ್ಥೆಯು ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವೆಂದು ಘೋಷಿಸಿದೆ. ಪ್ರತಿ ವರ್ಷ ಈ ದಿನವನ್ನು ಧ್ಯಾನ ದಿನ ಎಂದು ಆಚರಿಸಲಾಗುತ್ತದೆ


ನವದೆಹಲಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಂದು ವಿಶ್ವ ಧ್ಯಾನ ದಿನ. ಧ್ಯಾನವು ಮಾನಸಿಕ ಆರೋಗ್ಯ ಹಾಗೂ ದೈಹಿಕ ಸದೃಢತೆಗೆ ಕೊಡುಗೆ ನೀಡುತ್ತದೆ. ಧ್ಯಾನದ ಮಹತ್ವವನ್ನು ಗುರುತಿಸಿದ ವಿಶ್ವಸಂಸ್ಥೆಯು ಡಿಸೆಂಬರ್ 21 ರಂದು ವಿಶ್ವ ಧ್ಯಾನ ದಿನವೆಂದು ಘೋಷಿಸಿದೆ. ಪ್ರತಿ ವರ್ಷ ಈ ದಿನವನ್ನು ಧ್ಯಾನ ದಿನ ಎಂದು ಆಚರಿಸಲಾಗುತ್ತದೆ

ವಿಶ್ವಾದ್ಯಂತ ಯೋಗಕ್ಷೇಮ, ಶಾಂತಿ ಮತ್ತು ಸಾವಧಾನತೆಯನ್ನು ಉತ್ತೇಜಿಸಲು ಜಾಗತಿಕ ಉಪಕ್ರಮವಾಗಿ ಮೊದಲ ವಿಶ್ವ ಧ್ಯಾನ ದಿನವನ್ನು ಇಂದು ಆಚರಿಸಲಾಗುತ್ತಿದೆ.

ಶಾಂತಿ, ಮಾನಸಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಧ್ಯಾನದ ಪರಿವರ್ತಕ ಪ್ರಯೋಜನಗಳನ್ನು ಸಾರಲು ಈ ದಿನವನ್ನು ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಡಿಸೆಂಬರ್ ೨೧ ಅನ್ನು ವಿಶ್ವ ಧ್ಯಾನ ದಿನವನ್ನಾಗಿ ಘೋಷಿಸಿ, ಭಾರತ ಸಹ-ಪ್ರಾಯೋಜಿತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ದೈಹಿಕ - ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಅದರ ಪ್ರಯೋಜನಗಳಿಗಾಗಿ ಖ್ಯಾತವಾಗಿರುವ ಧ್ಯಾನದ ಅಭ್ಯಾಸ ಇನ್ನು ಮುಂದೆ ವಾರ್ಷಿಕ ಜಾಗತಿಕ ಆಚರಣೆಯಾಗಿ ಗುರುತಿಸಲಾಗುವುದು.

ಈ ದಿನದ ಅಂಗವಾಗಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರು, ಧ್ಯಾನ ಮಾಡಿಸುವ ಜಾಗತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹರೀಶ್, ವಿಶ್ವಸಂಸ್ಥೆಯ ಈ ನಿರ್ಧಾರ ಯೋಗ ಹಾಗೂ ಧ್ಯಾನದ ನಡುವೆ ಸಂಬಂಧವಿದ್ದು, ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಪೂರಕ ಎಂಬುದನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande