ನವದೆಹಲಿ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತ, ಮಲೇರಿಯಾ ಪ್ರಕರಣಗಳು ಮತ್ತು ಸಂಬಂಧಿತ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಪ್ರದರ್ಶಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವ ಮಲೇರಿಯಾ ವರದಿ ೨೦೨೪ ರಲ್ಲಿ ಉಲ್ಲೇಖಿಸಲಾಗಿದೆ. ದೂರದ ಪ್ರದೇಶಗಳಲ್ಲಿ ಮಲೇರಿಯಾವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತಿರುವ ಭಾರತದ ಸಮುದಾಯ ಆರೋಗ್ಯ ಕಾರ್ಯಕರ್ತರ, ವಿಶೇಷವಾಗಿ ಮಹಿಳೆಯರ ಕೊಡುಗೆಗಳನ್ನು ವರದಿ ಶ್ಲಾಘಿಸಿದೆ. ವರದಿಯ ಪ್ರಕಾರ, ರಾಷ್ಟ್ರವ್ಯಾಪಿ, ಭಾರತದಲ್ಲಿ ಅಂದಾಜು ಮಲೇರಿಯಾ ಪ್ರಕರಣಗಳ ಸಂಖ್ಯೆ ೨೦೧೭ ರಲ್ಲಿ ೬.೪ ಮಿಲಿಯನ್‌ನಿಂದ ೨೦೨೩ ರಲ್ಲಿ ೨ ಮಿಲಿಯನ್ ಪ್ರಕರಣಗಳಷ್ಟು ಕಡಿಮೆಯಾಗಿದೆ, ಇದು ಶೇಕಡಾ ೬೯ ರಷ್ಟು ಇಳಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್