ಏಷ್ಯಾ ಕಪ್ ಹಾಕಿ : ಭಾರತಕ್ಕೆ ೫-೦ ಅಂತರದ ಭರ್ಜರಿ ಗೆಲುವು
 ನಾಳೆ ಚೀನಾ- ಭಾರತ ತಂಡ ಮುಖಾಮುಖಿ
Women Junior Asia Cup Hockey


ಮಸ್ಕತ್, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಒಮಾನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ೫-೦ ಗೋಲುಗಳ ಅಂತರದಿಂದ ಮಲೇಷ್ಯಾ ತಂಡವನ್ನು ಮಣಿಸಿದೆ.

ಇದು ಮಲೇಷ್ಯಾ ವಿರುದ್ಧ ಭಾರತ ತಂಡಕ್ಕೆ ಒಲಿದ ಸತತ ಮೂರನೇ ಗೆಲುವಾಗಿದೆ. ನಿಧಾನಗತಿಯ ಆರಂಭ ಮತ್ತು ಮಲೇಷ್ಯಾದ ಕಠಿಣ ಡಿಫೆನ್ಸ್ ನಡುವೆಯೂ ಭಾರತವು ಮೂರನೇ ಕ್ವಾರ್ಟರ್ ನಲ್ಲಿ ಮೇಲುಗೈ ಸಾಧಿಸಿತು.

ಭಾರತದ ಪರ ವೈಷ್ಣವಿ ಫಾಲ್ಕೆ ೩೨ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿದರೆ, ದೀಪಿಕಾ (೩೭, ೩೯, ೪೮ನೇ ನಿಮಿಷ) ಹಾಗೂ ಕನಿಕಾ ಸಿವಾಚ್ (೩೮ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.

ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ೧೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ್ದ ಭಾರತ ತಂಡ ನಾಳೆ ಚೀನಾ ವಿರುದ್ಧ ಸೆಣಸಲಿದೆ.

ಪಂದ್ಯ ರಾತ್ರಿ ೮.೩೦ಕ್ಕೆ ಆರಂಭವಾಗಲಿದೆ.

ಜೂನಿಯರ್ ಏಷ್ಯಾ ಕಪ್ ಮುಂದಿನ ವರ್ಷ ಚಿಲಿಯಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಗೆ ಅರ್ಹತಾ ಸ್ಪರ್ಧೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande