ಬಳ್ಳಾರಿ : ಆರ್‍ವೈಎಂಸಿ ಕಾಲೇಜಿನಲ್ಲಿ ಕಲ್ಬುರ್ಗಿ ವಲಯದ `ಹಗ್ಗಜಗ್ಗಾಟ' ಪಂದ್ಯಾವಳಿ
ಬಳ್ಳಾರಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇಂಜಿನಿಯರಿಂಗ್ ವಿದ್ಯಾರ್ಥಿಗಳು ದೈಹಿಕ ಕಸರತ್ತು ಮತ್ತು ಸೃಜನಶೀಲತೆಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆರೋಗ್ಯವನ್ನು - ಏಕಾಗ್ರತೆಯನ್ನು ಸಾಧಿಸಬೇಕು ಎಂದು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಲಿ
ಬಳ್ಳಾರಿ : ಆರ್‍ವೈಎಂಸಿ ಕಾಲೇಜಿನಲ್ಲಿ ಕಲ್ಬುರ್ಗಿ ವಲಯದ `ಹಗ್ಗಜಗ್ಗಾಟ' ಪಂದ್ಯಾವಳಿ


ಬಳ್ಳಾರಿ : ಆರ್‍ವೈಎಂಸಿ ಕಾಲೇಜಿನಲ್ಲಿ ಕಲ್ಬುರ್ಗಿ ವಲಯದ `ಹಗ್ಗಜಗ್ಗಾಟ' ಪಂದ್ಯಾವಳಿ


ಬಳ್ಳಾರಿ : ಆರ್‍ವೈಎಂಸಿ ಕಾಲೇಜಿನಲ್ಲಿ ಕಲ್ಬುರ್ಗಿ ವಲಯದ `ಹಗ್ಗಜಗ್ಗಾಟ' ಪಂದ್ಯಾವಳಿ


ಬಳ್ಳಾರಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇಂಜಿನಿಯರಿಂಗ್ ವಿದ್ಯಾರ್ಥಿಗಳು ದೈಹಿಕ ಕಸರತ್ತು ಮತ್ತು ಸೃಜನಶೀಲತೆಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆರೋಗ್ಯವನ್ನು - ಏಕಾಗ್ರತೆಯನ್ನು ಸಾಧಿಸಬೇಕು ಎಂದು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಲಿ ಸದಸ್ಯ ಬಾಡದ ಪ್ರಕಾಶ್ ಅವರು ಕರೆ ನೀಡಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲ್ಬುರ್ಗಿ ವಲಯದ ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವೃತ್ತಿಪರ ಕೋರ್ಸ್‍ಗಳಲ್ಲಿ ಪಠ್ಯಕ್ಕೆ - ಪ್ರಯೋಗಾಲಯಕ್ಕೆ ವಿದ್ಯಾರ್ಥಿಗಳು ಸೀಮಿತರಾಗಿರುತ್ತಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಸಾಮೂಹಿಕ ಜವಾಬ್ದಾರಿ, ತಂಡ ನಿರ್ವಹಣೆ, ಸವಾಲನ್ನು ಸ್ವೀಕರಿಸಿ - ಯಶಸ್ವಿಯಾಗುವ ಚಾಣಾಕ್ಷತನ ಬರುತ್ತವೆ ಎಂದರು.

ಈ ಪಂದ್ಯಾವಳಿಗಳಲ್ಲಿ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ತಂಡವು ಜಯಗಳಿಸಿ ಟ್ರೋಫಿ ಯನ್ನು ಪಡೆಯಿತು. ತಂಡದಲ್ಲಿ ದರ್ಶನ್ (ತಂಡದ ನಾಯಕ), ಸಾಹಿತ್ಯ ವರ್ಮ (ಉಪನಾಯಕ), ಕಾರ್ತಿಕ್ ರೆಡ್ಡಿ, ಮರುಳ ಸಿದ್ದೇಶ್, ದರ್ಶನ್ ನಾಯಕ್, ಶ್ರೀಕಾಂತ್, ಶ್ರೀನಿವಾಸ, ಅಜಯ್ ಕುಮಾರ, ಸಂಜಯ್, ಜಯ ಸೂರ್ಯ, ಹರಿ ಕಿರಣ್, ತರುಣ್, ಶಂಕರಗೌಡ, ಭೂಷಣ್ ಭಾಗವಹಿಸಿದ್ದರು.

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಂ. ಪ್ರಭುಸ್ವಾಮಿ, ದೈಹಿಕ ಶಿಕ್ಷಕ ವಿಜಯ ಮಹಾಂತೇಶ್, ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ ವೇದಿಕೆಯಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande