ಡಮಾಸ್ಕಸ್, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಿರಿಯಾ ಮೇಲೆ ದಾಳಿ ಮಾಡಿರುವ ಇಸ್ರೇಲ್ ನೂರಕ್ಕೂ ಹೆಚ್ಚು ಸೇನಾ ನೆಲೆಗಳನ್ನು ನಾಶ ಮಾಡಿದೆ. ಸಿರಿಯಾವನ್ನು ಬಂಡುಕೋರರು ವಶಪಡಿಸಿಕೊಂಡ ನಂತರ ನಡೆದ ದಾಳಿ ಇದಾಗಿದೆ. ಇಸ್ರೇಲ್ ಈಶಾನ್ಯದಲ್ಲಿರುವ ಹಸಕಾಹ್ ಗ್ರಾಮೀಣ ಪ್ರದೇಶದಲ್ಲಿರುವ ಕಮಿಶ್ಲಿ ವಿಮಾನ ನಿಲ್ದಾಣ ಮತ್ತು ಟಾರ್ತಾಬ್ ರೆಜಿಮೆಂಟ್ ಅನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ ದಾಳಿಯಂದಾಗಿ ಯುದ್ದ ಟ್ಯಾಂಕ್‌ಗಳು ಅಪಾರ ಪ್ರಮಾಣದ ಮದ್ದುಗುಂಡುಗಳು ಬೆಂಕಿಗಾಹುತಿಯಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa