ಮಾಸ್ಕೋ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ರಷ್ಯಾದ ಸಹವರ್ತಿ ಆಂಡ್ರೆ ಬೆಲೌಸೊವ್ ಇಂದು ಮಾಸ್ಕೋದಲ್ಲಿ ಸೇನಾ ಮತ್ತು ಸೇನಾ-ತಾಂತ್ರಿಕ ಸಹಕಾರ ಕುರಿತ ಭಾರತ-ರಷ್ಯಾ ಅಂತರ-ಸರ್ಕಾರಿ ಆಯೋಗದ ೨೧ನೇ ಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
ಸೇನೆಯಿಂದ ಸೇನೆಗೆ ಮತ್ತು ಕೈಗಾರಿಕಾ ಸಹಕಾರ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಬಹುಮುಖಿ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಉಭಯ ನಾಯಕರು ಪರಿಶೀಲಿಸಲಿದ್ದಾರೆ. ಪರಸ್ಪರ ಹಿತಾಸಕ್ತಿಯ ಸಮಕಾಲೀನ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್