ನವದೆಹಲಿ, 07 ನವೆಂಬರ್(ಹಿ.ಸ.) :
ಆ್ಯಂಕರ್ : ಮನುಕುಲಕ್ಕೆ ಅಂಟಿದ ಬಹು ದೊಡ್ಡ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದಾಗಿದೆ. ಈ ಕಾಯಿಲೆಯೂ ಮನುಷ್ಯನನ್ನು ಸಾವಿನ ಹತ್ತಿರಕ್ಕೆ ಕರದೊಯ್ಯುತ್ತದೆ. ಒಂದು ಕಾಲದಲ್ಲಿ ಯಾರಿಗಾದರು ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂಬ ಭಾವನ ಜನರಲ್ಲಿ ಇತ್ತು. ಆದರೆ ಈಗ ಅದರ ಅಗತ್ಯವಿಲ್ಲ.
ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಆ ರೋಗಿಯ ಸಾವು ಬದುಕು ಅವಲಂಬಿತವಾಗಿರುತ್ತದೆ. ಹಾಗಾಗಿ ಜನರಿಗೆ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಈ ದಿನದ ಇತಿಹಾಸವೇನು? ಆಚರಣೆ ಮಾಡುವ ಉದ್ದೇಶವೇನು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ಮೊದಲ ಬಾರಿಗೆ ಸೆಪ್ಟೆಂಬರ್ 2014 ರಂದು ಆಗಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಅವರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಕ್ಕೆ ಚಾಲನೆ ನೀಡಿದರು.
ಕೆಲವು ಸಾಮಾನ್ಯ ಕ್ಯಾನ್ಸರ್‌ಗಳೆಂದರೆ, ಸ್ತನ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಸರಿಸುಮಾರು ಮೂರನೇ ಒಂದು ಭಾಗದಷ್ಟು ಸಾವುಗಳು ತಂಬಾಕು ಮತ್ತು ಮದ್ಯಪಾನದಿಂದ ಸಂಭವಿಸುಸತ್ತಿವೆ.
ಕ್ಯಾನ್ಸರ್ ಬಂದಾಗ ಅದನ್ನು ಆರಂಭಿಕ ಹಂತದಲ್ಲೆಯೇ ಪತ್ತೆ ಹಚ್ಚಿದರೆ ರೋಗಿಯನ್ನು ಬದಕಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ತಡವಾದಷ್ಟು ಮನುಷ್ಯನ ದೇಹವನ್ನು ಆವರಿಸುತ್ತದೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಆಚರಣೆಯ ಮೂಲ ಉದ್ದೇಶ ಆರಂಭದಲ್ಲೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವುದಾಗಿದೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಸಂದೇಶಗಳು:
ಬದುಕಿನಲ್ಲಿ ಎಷ್ಟೇ ಅಡೆತಡೆ ಬಂದರೂ ಅದನ್ನು ನಿವಾರಿಸುವ ಶಕ್ತಿ ನಿಮಗಿದೆ. ಆದ್ದರಿಂದ ಅನಾರೋಗ್ಯ ನಿಮ್ಮ ಜೀವನವನ್ನು ಆಳಲು ಬಿಡಬೇಡಿ. ಇಂದೇ ಜಾಗೃತರಾಗಿ.
ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಹೆಚ್ಚಿನ ಅರಿವು ಮೂಡಿಸೋಣ. ನಮ್ಮ ಜೀವನದಿಂದ ಕ್ಯಾನ್ಸರ್ ನಿರ್ಮೂಲನೆ ಮಾಡೋಣ.
ಕ್ಯಾನ್ಸರ್ ವ್ಯಕ್ತಿಯ ಜೀವನವನ್ನು ತೆಗೆದುಕೊಳ್ಳುವುದಲ್ಲದೆ ಕುಟುಂಬದ ಸಂತೋಷವನ್ನು ಹಾಳು ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಮುನ್ನ ಜಾಗೃತರಾಗಿ.
/ Dr. Vara Prasada Rao PV