’ಒಂದು ಶ್ರೇಣಿ ಒಂದು ಪಿಂಚಣಿ’ ಇಂದಿಗೆ ೧೦ ವರ್ಷ
ನವದೆಹಲಿ, 07 ನವೆಂಬರ್(ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರ ’ಒಂದು ಶ್ರೇಣಿ ಒಂದು ಪಿಂಚಣಿ’ - ಒಆರ್‌ಒಪಿ ಯೋಜನೆ ಜಾರಿಗೊಳಿಸಿ ಇಂದಿಗೆ ೧೦ ವರ್ಷ ಪೂರ್ಣಗೊಂಡಿದೆ. ಇದರಿಂದ ಸಶಸ್ತ್ರ ಪಡೆಗಳ ಸುಮಾರು ೨೫ ಲಕ್ಷ ಯೋಧರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿವರ್ಷ ಪಿಂಚಣಿ ಪರಿಷ್ಕರಣೆಯಾಗಲಿದೆ. ಈ ವರ್ಷ ಜು
implement One Rank One Pension


ನವದೆಹಲಿ, 07 ನವೆಂಬರ್(ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರ ’ಒಂದು ಶ್ರೇಣಿ ಒಂದು ಪಿಂಚಣಿ’ - ಒಆರ್‌ಒಪಿ ಯೋಜನೆ ಜಾರಿಗೊಳಿಸಿ ಇಂದಿಗೆ ೧೦ ವರ್ಷ ಪೂರ್ಣಗೊಂಡಿದೆ. ಇದರಿಂದ ಸಶಸ್ತ್ರ ಪಡೆಗಳ ಸುಮಾರು ೨೫ ಲಕ್ಷ ಯೋಧರು ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರತಿವರ್ಷ ಪಿಂಚಣಿ ಪರಿಷ್ಕರಣೆಯಾಗಲಿದೆ. ಈ ವರ್ಷ ಜುಲೈನಿಂದ ಅನ್ವಯವಾಗುವಂತೆ ಪಿಂಚಣಿ ಪರಿಷ್ಕರಣೆಯಾಗಿತ್ತು. ಮಾಜಿ ಯೋಧರಿಗೆ ಸಮಾನ ಮತ್ತು ನ್ಯಾಯಯುತ ಪಿಂಚಣಿ ಪಾವತಿ ಮಾಡುವ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ನಿವೃತ್ತ ಯೋಧರು ಯಾವ ಶ್ರೇಣಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೊ, ಅದನ್ನು ಪರಿಗಣಿಸಿ ಪಿಂಚಣಿಯನ್ನು ಪಾವತಿಸಲಾಗುವುದು. ರಕ್ಷಣಾ ಸಚಿವಾಲಯ ಪ್ರಸ್ತಕ ಹಣಕಾಸು ವರ್ಷದಲ್ಲಿ ಒಆರ್‌ಒಪಿ ಯೋಜನೆಗೆ ೪ ಸಾವಿರದ ೪೬೮ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಈ ವರ್ಷದ ಸೆಪ್ಟೆಂಬರ್ ೩೦ರವರೆಗೆ ಸಶಸ್ತ್ರ ಪಡೆಗಳ ಪಿಂಚಣಿದಾರರಿಗೆ ಸುಮಾರು ೮೯೫ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande