ನವದೆಹಲಿ, 07 ನವೆಂಬರ್(ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಗೋವಾಕ್ಕೆ ಭೇಟಿ ನೀಡಿದ್ದಾರೆ. ಅವರು ‘ಡೇ ಅಟ್ ಸೀ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಂದು ಬೆಳಗ್ಗೆ ಗೋವಾದ ನೌಕಾನೆಲೆಯ ಐಎನ್‌ಎಸ್ ಹಂಸದಲ್ಲಿ ಸಾಂಪ್ರದಾಯಿಕ ಗೌರವರಕ್ಷೆ ಸ್ವೀಕರಿಸಿದರು.
ರಾಷ್ಟ್ರಪತಿ ಅವರು, ಐಎನ್‌ಎಸ್ ವಿಕ್ರಾಂತ್‌ನಿಂದ ಹಾರುವ ಕಾರ್ಯಾಚರಣೆಗಳು, ಸಮರಾಭ್ಯಾಸ, ಕ್ಷಿಪಣಿ ಅಭ್ಯಾಸ ಹಾಗೂ ಹೆಲಿಕಾಫ್ಟರ್ ಮತ್ತು ವಿಮಾನಗಳ ಹಾರಾಟ ಸೇರಿದಂತೆ ಭಾರತೀಯ ನೌಕಾಪಡೆಯ ಯೋಧರ ಕಾರ್ಯಾಚರಣೆಯ ಸಾಮರ್ಥ್ಯ ವೀಕ್ಷಣೆಗೆ ಸಾಕ್ಷಿಯಾಗಲಿದ್ದಾರೆ.
ಇದಕ್ಕೂ ಮುನ್ನ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳೈ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ವಾಗತಿಸಿದರು
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್