ಭಯೋತ್ಪಾದನಾ ನಿಗ್ರಹ ಸಮಾವೇಶ-೨೦೨೪ 
ನವದೆಹಲಿ, 07 ನವೆಂಬರ್(ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿಂದು ಭಯೋತ್ಪಾದನಾ ನಿಗ್ರಹ ಸಮಾವೇಶ-೨೦೨೪ ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನವನ್ನು ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆ ಆಯೋಜಿಸಿದೆ. ಸಮ್ಮೇಳನದಲ್ಲಿ ಪ್ರಮುಖವಾಗಿ ’ಸಂಪೂರ್ಣ ಸರ್ಕ
Amith sha


ನವದೆಹಲಿ, 07 ನವೆಂಬರ್(ಹಿ.ಸ.) :

ಆ್ಯಂಕರ್ :

ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿಂದು ಭಯೋತ್ಪಾದನಾ ನಿಗ್ರಹ ಸಮಾವೇಶ-೨೦೨೪ ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನವನ್ನು ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆ ಆಯೋಜಿಸಿದೆ.

ಸಮ್ಮೇಳನದಲ್ಲಿ ಪ್ರಮುಖವಾಗಿ ’ಸಂಪೂರ್ಣ ಸರ್ಕಾರದ ವಿಧಾನ’ದಲ್ಲಿ ಭಯೋತ್ಪಾದನೆಯ ಅಪಾಯದ ವಿರುದ್ಧ ಸಂಘಟಿತ ಕ್ರಮಕ್ಕಾಗಿ ಸಂಪರ್ಕಗಳನ್ನು ಸ್ಥಾಪಿಸುವ ಮೂಲಕ ಬಾಧ್ಯಸ್ಥರ ನಡುವೆ ಸಮನ್ವಯತೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಭವಿಷ್ಯದ ನೀತಿ ನಿರೂಪಣೆಗೆ ವಸ್ತುನಿಷ್ಠ ಒಳಹರಿವುಗಳನ್ನು ಪ್ರಸ್ತುತಪಡಿಸುವುದು ಒಳಗೊಂಡಿದೆ.

ಸಮ್ಮೇಳನದ ಕುರಿತಂತೆ ಸಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿರುವ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸರ್ಕಾರ ಭಯೋತ್ಪಾದನೆ ಮುಕ್ತ ಭಾರತವನ್ನು ನಿರ್ಮಿಸಲು ಹಾಗೂ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣತೆ ನೀತಿ ಮುಂದುವರೆಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಈ ಸಮ್ಮೇಳನದಿಂದ ದೇಶದ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯತೆ ಹೆಚ್ಚಾಗಲಿದೆ. ಭಯೋತ್ಪಾದನೆ ನಿಗ್ರಹ ಅಭಿಯೋಜನಾ ಸವಾಲುಗಳು ಸೇರಿದಂತೆ ನಿರ್ಣಾಯಕ, ಕಾನೂನು ಸಮಸ್ಯೆಗಳ ಕುರಿತಂತೆ ಪೊಲೀಸ್ ಅಧಿಕಾರಿಗಳು ಹಾಗೂ ಎಲ್ಲ ವಲಯಗಳ ತಜ್ಞರು ಸಮಾಲೋಚನೆ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande