ನವದೆಹಲಿ, 06 ನವೆಂಬರ್(ಹಿ.ಸ.) :
ಆ್ಯಂಕರ್ : ಬಾದಾಮಿ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಯಾವ ಬಾದಾಮಿ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಕೆಲವರು ಹುರಿದ ಬಾದಾಮಿ ತಿನ್ನಲು ಇಷ್ಟಪಡುತ್ತಾರೆ, ಕೆಲವರು ಒಣ ಬಾದಾಮಿ ತಿನ್ನುತ್ತಾರೆ, ಕೆಲವರು ನೆನೆಸಿದ ಬಾದಾಮಿ ತಿನ್ನುತ್ತಾರೆ. ನೆನೆಸಿದ ಅಥವಾ ಕಚ್ಚಾ ಬಾದಾಮಿಯನ್ನು ಸವಿಯುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಆರೋಗ್ಯದ ವಿಷಯಕ್ಕೆ ಬಂದಾಗ ನೆನೆಸಿದ ಬಾದಾಮಿ ಆರೋಗ್ಯಕ್ಕೆ ಉತ್ತಮವಾದುದ್ದು. ಇವೆಲ್ಲಕ್ಕಿಂತ ಬಾದಾಮಿಯನ್ನು ನೆನೆಸಿಟ್ಟು ತಿಂದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ನೆನೆಸಿದ ಬಾದಾಮಿಯ ಆರೋಗ್ಯದ ಗುಟ್ಟು!
ಬಾದಾಮಿ ಬೀಜಗಳಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಾದಾಮಿಯಲ್ಲಿ ಪ್ರಮುಖವಾಗಿ ಖನಿಜಾಂಶಗಳಾದ ವಿಟಮಿನ್ ಇ, ಕ್ಯಾಲ್ಸಿಯಂ, ಜಿಂಕ್, ಮೆಗ್ನೀಷಿಯಂ ಮತ್ತು ವಿಟಮಿನ್ ವಿಪುಲ ಪ್ರಮಾಣದಲ್ಲಿದೆ.
ಮಾತ್ರವಲ್ಲದೆ ತಲೆ ಕೂದಲಿನ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೆ ಕೂಡ ಅನುಕೂಲಕಾರಿಯಾಗಿವೆ. ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಜೀರ್ಣ ಶಕ್ತಿ ಕೂಡ ವೃದ್ಧಿಯಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ:
ನಿಮ್ಮ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆನೆಸಿದ ಬಾದಾಮಿ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ.
ನೀವು ಸೇವಿಸಿರುವ ಇತರ ಆಹಾರಗಳಲ್ಲಿ ಸಿಗುವ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಹೀರಿಕೊಂಡು ದೇಹದ ಚೈತನ್ಯ ವೃದ್ಧಿಗೆ ನೆರವಾಗುತ್ತದೆ.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು:
ಅಧ್ಯಯನಗಳ ಪ್ರಕಾರ ಬಾದಾಮಿ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದ್ದು,
ಇದು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ.ಇದರಿಂದ ಹೃದಯಕ್ಕೆ ಹಾಗೂ ಹೃದಯ ರಕ್ತನಾಳಗಳಿಗೆ ಪ್ರಯೋಜನಕಾರಿಯಾಗಿದೆ.
ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ:
ಗರ್ಭಿಣಿಯರ ಗರ್ಭಕೋಶದ ಆರೋಗ್ಯ ಕಾಪಾಡುವಲ್ಲಿ ನೆನೆಸಿದ ಬಾದಾಮಿ ಬೀಜ ಸಹಕಾರಿಯಾಗುತ್ತದೆ.
ಏಕೆಂದರೆ ಇದರಲ್ಲಿ ಪೋಲಿಕ್ ಆಮ್ಲ ಅಪಾರ ಪ್ರಮಾಣದಲ್ಲಿದೆ.ಇದು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಮಾತ್ರವಲ್ಲದೆ ಮಗುವಿಗೆ ಬೇಕಾಗಿರುವ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ:
ಪ್ರತಿ ದಿನ ಖಾಲಿ ಹೊಟ್ಟೆಗೆ ನೆನೆಸಿದ ಬಾದಾಮಿ ಬೀಜಗಳನ್ನು ತಿಂದ್ರೆ ಬಹಳ ಬೇಗನೇ ರಕ್ತದ ಒತ್ತಡ ನಾರ್ಮಲ್ ಆಗುತ್ತದೆ.
ಮೆದುಳಿನ ಕಾರ್ಯವನ್ನು ಹೆಚ್ಚಿಸಿ
:
ಬಾದಾಮಿಯಲ್ಲಿ ಕಂಡುಬರುವ ವಿಟಮಿನ್ ಇ, ಬುದ್ಧಿಮಾಂದ್ಯತೆಯನ್ನು ತಡೆಯುತ್ತದೆ ಎಂದು ತೋರಿಸಲಾಗಿದೆ. ಇದು ಜ್ಞಾಪಕಶಕ್ತಿಯನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಉತ್ತಮ ಮೆದುಳಿನ ಕಾರ್ಯಕ್ಕಾಗಿ ಬಾದಾಮಿ ಪ್ರಯೋಜನಗಳನ್ನು ಸಹ ಅಧ್ಯಯನಗಳು ತೋರಿಸುತ್ತವೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್