ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ
ವಾಷಿಂಗ್ಟನ್, 05 ನವೆಂಬರ್(ಹಿ.ಸ.) : ಆ್ಯಂಕರ್ : ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಅಮೆರಿಕದಲ್ಲಿ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗಿದೆ. ಅಮೆರಿಕದ ಮತದಾರರು ತಮ್ಮ ನಾಲ್ಕು ವರ್ಷಗಳ ಭವಿಷ್ಯವನ್ನು ಇಂದು ನವೆಂಬರ್ 5 ರಂದು ಆಯ್ಕೆ ಮಾಡುತ್ತಾರೆ. ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಗೆಲ್ಲುತ್ತಾರಾ
ನವದೆಹಲಿ, 05 ನವೆಂಬರ್(ಹಿ.ಸ.) :ಆ್ಯಂಕರ್ :


ವಾಷಿಂಗ್ಟನ್, 05 ನವೆಂಬರ್(ಹಿ.ಸ.) :

ಆ್ಯಂಕರ್ : ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಅಮೆರಿಕದಲ್ಲಿ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗಿದೆ. ಅಮೆರಿಕದ ಮತದಾರರು ತಮ್ಮ ನಾಲ್ಕು ವರ್ಷಗಳ ಭವಿಷ್ಯವನ್ನು ಇಂದು ನವೆಂಬರ್ 5 ರಂದು ಆಯ್ಕೆ ಮಾಡುತ್ತಾರೆ. ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಗೆಲ್ಲುತ್ತಾರಾ ಅಥವಾ ಭಾರತೀಯ ಮೂಲದವರಾದ ಡೆಮಾ ಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲುತ್ತಾರಾ ಎಂಬುದು ನಿರ್ಧಾರವಾಗಲಿದೆ.

ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದೆ. ಅಮೆರಿಕನ್ನರು ಇಂದು ದೇಶದ 47 ನೇ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ.ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ನಾಳೆ ಬೆಳಗ್ಗೆ 6.30ಕ್ಕೆ (ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ) ಅಂತ್ಯವಾಗಲಿದೆ.

ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ. ನವೆಂಬರ್​ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್​ ಡಿಸೆಂಬರ್​ನ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ. ಇಲ್ಲಿ 50 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 538 ಎಲೆಕ್ಟರ್ಸ್‌ ಚುನಾಯಿತರಾಗುತ್ತಾರೆ. ಪ್ರತಿ ರಾಜ್ಯದಿಂದ ಆಯ್ಕೆಯಾದ ಎಲೆಕ್ಟರ್ಸ್‌ ಸಂಖ್ಯೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಅಧಿಕಾರ ಲಭಿಸುತ್ತದೆ. 54 ಸ್ಥಾನಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಜನಸಂಖ್ಯಾ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದವರು ಸಂಪೂರ್ಣ 54 ಸ್ಥಾನಗಳಲ್ಲೂ ವಿಜಯಿಶಾಲಿಗಳಾಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande