ಕಡೆ ಕಾರ್ತಿಕ ಸೋಮವಾರದ ಅಂತರಗ0ಗೆ ಜಾತ್ರೆಗೆ ಸಿದ್ದತೆ
ಕಡೆ ಕಾರ್ತಿಕ ಸೋಮವಾರದ ಅಂತರಗ0ಗೆ ಜಾತ್ರೆಗೆ ಸಿದ್ದತೆ
ಕೋಲಾರದ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಗಳಿಸಿರುವ ಅಂತರಗAಗೆ ಜಾತ್ರೆಗೆ ಬರುವ ಭಕ್ತರನ್ನು ಆಹ್ವಾನಿಸಲು ಬಸ್‌ನಿಲ್ದಾಣ ವೃತ್ತದಲ್ಲಿ ಬೃಹತ್ ಕಮಾನು ಹಾಗೂ ಶಿವನ ಬೃಹತ್ ಕಟೌಟ್‌ಗಳನ್ನು ನಿರ್ಮಿಸಲಾಗಿದೆ.


ಕೋಲಾರ, ೨೪ ನವೆಂಬರ್ (ಹಿ.ಸ) :

ಆಂಕರ್ : ದಕ್ಷಿಣ ಕಾಶಿಯೆಂದೇ ಖ್ಯಾತಿಯಾದ ನಗರದ ಅಂತರಗ0ಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ಅತ್ಯಂತ ವಿಶೇಷತೆ ಹೊಂದಿದ್ದು, ಲಕ್ಷಾಂತರ ಮಂದಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುವ ಹಿನ್ನಲೆಯಲ್ಲಿ ಭಜರಂಗದಳ,ವಿಹಿ0ಪ ಸೇರಿದಂತೆ ಹಿಂದೂಪರ ಸಂಘಟನೆಗಳು ಭಾನುವಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬೃಹತ್ ಸ್ವಾಗತ ಕಮಾನು, ಕೇಸರಿ ಬಂಟಿ0ಗ್, ಪ್ಲೆಕ್ಸ್ ಕಟ್ಟುವ ಮೂಲಕ ಇಡೀ ವೃತ್ತವನ್ನು ಕೇಸರಿಮಯಗೊಳಿಸಿವೆ.

ಅಂತರಗ0ಗೆ ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ನಗರದ ಬಸ್‌ನಿಲ್ದಾನದ ಸಮೀಪ ಬೃಹತ್ ಕಮಾನು ನಿರ್ಮಿಸಿರುವ ಬಜರಂಗದಳದ ಕಾರ್ಯಕರ್ತರು ಕಾಶಿ ವಿಶ್ವೇಶ್ವರಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ನೆರವಾಗಲು ಸಿದ್ದಗೊಂಡಿದ್ದು, ಅರ್ಚಕ ಮಂಜುನಾಥ್ ದೀಕ್ಷೀತ್‌ರಿಂದ ವಿಶೇಷ ಅಲಂಕಾರ,ಪೂಜೆ ನಡೆಯಲಿದೆ.

ಬಜರಂಗದಳ ಪ್ರತಿ ವರ್ಷವೂ ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸುವ ಕಾಶಿವಿಶ್ವೇಶ್ವರ ಸ್ವಾಮಿಯ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಜರಂಗದಳ ವಿಹಿಂಪದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಮಾಜಿ ಸಂಸದ ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಮುಂಜಾನೆ ೪ ಗಂಟೆಯಿ0ದಲೇ ಉಚಿತ ಬಸ್‌ಗಳನ್ನು ಓಡಿಸಲು ಹಲವಾರು ದಾನಿಗಳು ಮುಂದೆ ಬಂದಿದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಸಿದ್ದತೆ ಮಾಡಿದ್ದಾರೆ.

ಬಜರಂಗದಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತರನ್ನು ಸ್ವಾಗತಿಸುವ ದೊಡ್ಡ ಕಮಾನಿನೊಂದಿಗೆ ಇಡೀ ಪ್ರದೇಶದಲ್ಲಿ ಕೇಸರಿ ಧ್ವಜಗಳು ರರಾಜಿಸುವಂತೆ ಮಾಡಿದ್ದು, ಇಡೀ ಪ್ರದೇಶವೇ ಕೇಸರಿಮಯವಾಗಿದೆ. ಎಲ್ಲಾ ಕಡೆ ಶಿವನ ಕಟೌಟ್‌ಗಳು, ಪ್ಲೆಕ್ಸ್ಗಳು ಹಾಕಲಾಗಿದ್ದುಅಂತರಗ0ಗೆ ಜಾತ್ರೆಗೆ ಬರುವ ಹಿಂದೂಗಳಿಗೆ ಭವ್ಯ ಸ್ವಾಗತ ಕೋರುವ ಕಮಾನು ತಲೆಯೆತ್ತಿದೆ.

ಕಡೆ ಕಾರ್ತಿಕ ಸೋಮವಾರದ ಜಾತ್ರೆ ಮತ್ತಷ್ಟು ವಿಜೃಂಭಣೆಯಿ0ದ ನಡೆಸಲು ಪೂರ್ವಸಿದ್ದತೆ ನಡೆಸಿರುವ ಕಾರ್ಯಕರ್ತರು ಬಸ್‌ನಿಲ್ದಾಣ ವೃತ್ತದಲ್ಲಿ ಪೆಂಡಾಲ್ ನಿರ್ಮಿಸಿ, ಜಾತ್ರೆಗಾಗಿ ಬರುವ ಭಕ್ತರಿಗೆ ನೆರಳು ಒದಗಿಸಿ, ಉಚಿತ ಬಸ್ ಸೇವೆಯನ್ನು ಇಲ್ಲಿಂದಲೇ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.

ಬರುವ ಭಕ್ತಾಧಿಗಳಿಗೆ ಉಚಿತ, ಪ್ರಸಾದ,ಕುಡಿಯುವ ನೀರು, ರಕ್ಷಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರು ಕಳೆದೊಂದು ವಾರದಿಂದ ಶ್ರಮಿಸುತ್ತಿದ್ದಾರೆ.

ಬಜರಂಗದಳದಿ0ದ ನಗರದ ಬಸ್‌ನಿಲ್ದಾಣ ವೃತ್ತದಿಂದ ಉಚಿತ ಬಸ್ ಸೇವೆ ಸೋಮವಾರ ಮುಂಜಾನೆ ೪ ಗಂಟೆಯಿ0ದಲೇ ಆರಂಭಗೊಳ್ಳಲಿದ್ದು, ಬಸ್ಸುಗಳು ಬೆಳಗ್ಗಿನಿಂದ ರಾತ್ರಿ ಭಕ್ತರನ್ನು ವಾಪಸ್ಸು ಕರೆತರುವವರೆಗೂ ಒಡಾಟ ನಡೆಸುತ್ತವೆ ಎಂದು ಸಂಘಟನೆಯ ಬಾಲಾಜಿ, ಅಪ್ಪಿ ಹಾಗೂ ಜಿಲ್ಲಾ ಸಂಚಾಲಕ ಬಾಬು ತಿಳಿಸಿದ್ದಾರೆ.

ಭಕ್ತರು ಸ್ವಾಮಿಯ ದರ್ಶನಕ್ಕೆ ಬರಲು ಯಾವುದೇ ಅಡ್ಡಿ ಆತಂಕಕ್ಕೆ ಅವಕಾಶವಿಲ್ಲದಂತೆ ಬಜರಂಗದಳದ ಯುವಕರು ಸ್ವಯಂ ಸೇವಕರಾಗಿ ಹಗಲಿರುಳು ಶ್ರಮಿಸಲು ಸಂಘಟಿತರಾಗಿದ್ದಾರೆ.

ಬರುವ ಭಕ್ತರಿಗೆ ಬಜರಂಗದಳ,ವಿಹಿ0ಪ ಸಂಘಟನೆಗಳು, ಸತ್ಯನಾರಾಯಣಜ್ಯುವೆರ‍್ಸ್ನ ವೆಂಕಬದವರು, ಕಿಲಾರಿಪೇಟೆಯ ಮುನಿವೆಂಕಟಯದವ್ ನೇತೃತ್ವದ ಗೋಕುಲ ಮಿತ್ರ ಬಳಗ ಮತ್ತಿತರ ನೂರಾರು ಸಂಘಟನೆಗಳು, ಭಕ್ತರು ಪ್ರಸಾದ ವಿನಿಯೋಗಕ್ಕೆ ಸಿದ್ದತೆ ನಡೆಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಮಹಿಳೆಯರು ಸೇರುವುದರಿಂದ ಇಲ್ಲಿನ ಪೊಲೀಸ್ ಬಂದೋಬಸ್ತ್ ಮಾಡಬೇಕಾದ ಹೊಣೆಯೂ ಜಿಲ್ಲಾಡಳಿತದ ಮೇಲಿದೆ. ಹಿಂದೂಗಳ ಪವಿತ್ರ ಕ್ಷೇತ್ರವಾದ ಅಂತರಗ0ಗೆಯ ಮಹಿಮೆಗೆ ಧಕ್ಕೆಬಾರದಂತೆ ಬರುವ ಭಕ್ತರೂ ಸಹಾ ಸ್ವಚ್ಚತೆಗೆ ಒತ್ತು ನೀಡಬೇಕಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಜರಂಗದಳ ಮುಖಂಡ ಬಾಲಾಜಿ, ಬರುವ ಭಕ್ತಾಧಿಗಳಿಗೆ ತೊಂದರೆಯಾಗದAತೆ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇವೆ, ಅದಕ್ಕಾಗಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಬರುವ ಭಕ್ತರು ಕ್ಷೇತ್ರದಲ್ಲಿ ಸ್ವಚ್ಚತೆ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬಜರಂಗದಳದ ಬಾಲಾಜಿ, ಅಪ್ಪಿ ಆನಂದ್, ವಿಹಿಂಪ ಕಾರ್ಯದರ್ಶಿ ಬಾಬು, ಮುಖಂಡರಾದ ರವಿ, ಪವನ್, ವಿಶ್ವನಾಥ್, ವಿನಯ್, ಪೃಥ್ವಿ, ಲೋಕೇಶ್, ಸಾಯಿ ಸುಮನ್, ಸಾಯಿಮೌಳಿ, ಸಾಯಿಕುಮಾರ್, ಬದ್ರಿ, ಮಹೇಶ್, ಪ್ರವೀಣ್, ಮೌಳಿ, ಮಂಜು, ದೀಪು,ಲೋಹಿತ್, ಯಶವಂತ್, ಭರತ್, ವೆಂಕಟೇಶಬಾಬಾ,ಭವಾನಿ, ವೆಂಕಿ ಮತ್ತಿತರರು ಕಳೆದೆರಡು ದಿನಗಳಿಂದಲೇ ಸಿದ್ದತೆಗಳನ್ನು ನಡೆಸಿದ್ದಾರೆ.

ಚಿತ್ರ : ಕೋಲಾರದ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಗಳಿಸಿರುವ ಅಂತರಗAಗೆ ಜಾತ್ರೆಗೆ ಬರುವ ಭಕ್ತರನ್ನು ಆಹ್ವಾನಿಸಲು ಬಸ್‌ನಿಲ್ದಾಣ ವೃತ್ತದಲ್ಲಿ ಬೃಹತ್ ಕಮಾನು ಹಾಗೂ ಶಿವನ ಬೃಹತ್ ಕಟೌಟ್‌ಗಳನ್ನು ನಿರ್ಮಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande