ಬ್ರಹ್ಮನ ಪ್ರಪಂಚಕ್ಕಿಂತ ಕವಿಯ ಕವನ ಶ್ರೇಷ್ಠ : ಡಾ. ತೋಂಟದ ಸಿದ್ದರಾಮ ಶ್ರೀ 
ಬೆಳಗಾವಿ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಬ್ರಹ್ಮ ನಿರ್ಮಾಣದ ಪ್ರಪಂಚಕ್ಕಿಂತ ಕವಿಯ ನಿರ್ಮಾಣದ ಕವನ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ಹೇಳಿದ್ದಾರೆ. ಬೆಳಗಾವಿಯಲ್ಲಿ ಡಾ ಶಿವಾನಂದ ಮೂಲಿಮನಿ ಅವರ ಮಿಂಚು ಕವನ ಸಂಕಲನವನ್ನು ಬಿಡುಗಡೆಗೊಳ
Book relese


ಬೆಳಗಾವಿ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಬ್ರಹ್ಮ ನಿರ್ಮಾಣದ ಪ್ರಪಂಚಕ್ಕಿಂತ ಕವಿಯ ನಿರ್ಮಾಣದ ಕವನ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ಹೇಳಿದ್ದಾರೆ.

ಬೆಳಗಾವಿಯಲ್ಲಿ ಡಾ ಶಿವಾನಂದ ಮೂಲಿಮನಿ ಅವರ ಮಿಂಚು ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಸೀಮೆ ಇಲ್ಲದ ಪ್ರಪಂಚ ಎಂದರೆ ಅದು ಕಾವ್ಯ ಪ್ರಪಂಚ ಅದು ಅಪಾರವಾದದ್ದು ತನಗೆ ಬೇಕಾದಂತೆ ಕಾವ್ಯ ಸೃಷ್ಟಿ ಮಾಡುವ ಸ್ವಾತಂತ್ರ್ಯ ಕವಿಗಳಿಗೆ ಇದೆ ಡಾ.ಶಿವಾನಂದ ಮೂಲಿಮನಿಯವರು ಹೃದಯದ ಭಾವನೆಗಳನ್ನು ಮಿಂಚುಗಳ ಮೂಲಕ ಬೆಳಕಾಗಿಸಿದವರು, ಹೃದಯದ ಭಾವನೆಗಳಿಗೆ ಅಭಿವ್ಯಕ್ತಿ ನೀಡಿ ಕವನಗಳನ್ನಾಗಿಸಿದವರು ಕವಿ ಬ್ರಹ್ಮನಿದ್ದಂತೆ ಬ್ರಹ್ಮನಿಗಿಂತ ಕವಿ ಶ್ರೇಷ್ಠ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande