ಕಳವು ಪ್ರಕರಣದ ಆರೋಪಿ ಬಂಧನ, ಮಾಲು ವಶ 
ಕಳವು ಪ್ರಕರಣದ ಆರೋಪಿ ಬಂಧನ, ಮಾಲು ವಶ 
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೊಲೀಸರು ಕಳ್ಳರನ್ನು ಬಂಧಿಸಿ ಕಳುವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಕಳವು ಪ್ರಕರಣದ ಆರೋಪಿ ಬಂಧನ, ಮಾಲು ವಶ

ಕೋಲಾರ / ೨೪ ನವೆಂಬರ್ (ಹಿ.ಸ) : ಕಾಮಸಮುದ್ರಂ ಪೊಲೀಸ್ ಠಾಣೆ ಸರಹದ್ದು ಬಂದರ‍್ಲಹಳ್ಳಿ ಗ್ರಾಮದ ರತ್ನಮ್ಮ ಎಂಬುವರ ಮನೆಯಲ್ಲಿ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂಧಿಸಿ, ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.

ರತ್ನಮ್ಮ ಎಂಬುವರು ತಮ್ಮ ಮನೆಯ ಬೀರುವನಲ್ಲಿಟ್ಟಿದ್ದ ಚಿನ್ನದ ಚಂದ್ರಹಾರವನ್ನು ಮನೆಯ ಗಾರೆ ಕೆಲಸಕ್ಕೆ ಬಂದಿದ್ದ ಬಿಹಾರ ರಾಜ್ಯದ ಮುದುಬಾನಿ ಗ್ರಾಮದ ವಾಸಿ ರಂಜಿತ್ ಸಹಾನಿ ಎಂಬಾತನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿಎಸ್‌ಪಿ ಪಾಂಡುರAಗ. ಎಸ್ ಮತ್ತು ಕಾಮಸಮುದ್ರಂ ವೃತ್ತದ ಸಿಪಿಐ ನಾರಾಯಣಸ್ವಾಮಿ ಜಿ.ಸಿ ನೇತೃತ್ವದ ವಿಶೇಷ ಅಪರಾಧ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಹಾರ ರಾಜ್ಯದ ಮುದುಬಾನಿ ಗ್ರಾಮದ ವಾಸಿ ರಂಜಿತ್ ಸಹಾನಿ ೨೯ ವರ್ಷ ಎಂಬಾತನನ್ನು ಬಿಹಾರ್ ರಾಜ್ಯದಲ್ಲಿ ಬಂಧಿಸಿ, ಆತನಿಂದ ಸುಮಾರು ರೂ. ೨,೬೦,೦೦೦ ಮೌಲ್ಯದ ೩೭ ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರಂ ವೃತ್ತದ ಸಿಪಿಐ ನಾರಾಯಣಸ್ವಾಮಿ ಜಿ.ಸಿ, ಕಾಮಸಮುದ್ರಂ ಪಿ.ಎಸ್.ಐ ಕಿರಣ್‌ಕುಮಾರ್ ಬಿ.ವಿ, ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಅನಿಲ್‌ಕುಮಾರ್, ಮಂಜುನಾಥರೆಡ್ಡಿ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾAತರಾಜು ಅವರು ಪ್ರಶಂಶಿಸಿದ್ದಾರೆ.

ಚಿತ್ರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೊಲೀಸರು ಕಳ್ಳರನ್ನು ಬಂಧಿಸಿ ಕಳುವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande