ಕೋಲಾರ /೨೪ ನವೆಂಬರ್ (ಹಿ.ಸ) ಆಂಕರ್ : ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡ್ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವ ಯೋಜನೆಯಾದ ಮನೆ-ಮನೆಗೂ ನಲ್ಲಿಮೂಲಕ ನೀರು ಹರಿಸುವ ಜೆಜೆಎಂ ಕಾರ್ಯಕ್ರಮದ ಅಂದಾಜು ಮೊತ್ತ ೨.೫೦ ಲಕ್ಷ ರೂಗಳ ಕಾಮಗಾರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.
ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಶ್ರೀ ಕಾಶೀವಿಶ್ವೇಶ್ವರ ದೇವಾಲಯದ ಸಮೀಪದ ೨.೫೦ ಕೋಟಿ ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಗ್ರಾಮದಲ್ಲಿನ ಒಟ್ಟು ಅಂದಾಜು ಎರಡು ಸಾವಿರ ಮನೆಗಳಿದ್ದು, ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಒಂದು ಲಕ್ಷ ನೀರು ಸಂಗ್ರಹವಾಗುವ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. ಎಲ್ಲಾ ಮನೆ ಮನೆಗಳಿಗೂ ನಲ್ಲಿ ಹಾಕಿಸಲಾಗುವುದು ಎಂದರು.
ಡಿಸೆ0ಬರ್ ಒಳಗೆ ಕಾಮಗಾರಿ ಮುಗಿಸುವಂತೆ ಹಾಗು ಗುಣಮಟ್ಟ ಕಾಮಗಾರಿಯೊಂದಿಗೆ ಹಾಗು ಗ್ರಾಮದಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ರಸ್ತೆ ಅಗಿದು ತಕ್ಷಣ ಮಣ್ಣು ಮುಚ್ಚವಂತೆ ಗುತ್ತಿಗೆದಾರರು ಸೂಚಿಸಿದರು, ಸರ್ಕಾರವು ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ಭಾಗಗಳನ್ನು ಅಭಿವೃದಿಪಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಜಿ.ವಿ.ರಾಮಕೃಷ್ಣಾರೆಡ್ಡಿ, ಎಂ.ಜಿ.ಶ್ರೀನಿವಾಸರೆಡ್ಡಿ, ಸಿಮೆಂಟ್‌ನಾರಾಯಣಸ್ವಾಮಿ, ಮುಡಿವಾರಿಪಲ್ಲಿ ಸುಧಾಕರ್, ಡಿ.ಸಿ,ವೆಂಕಟರಮಣ, ಶ್ರೀರಾಮರೆಡ್ಡಿ, ಮಂಜುನಾಥರೆಡ್ಡಿ, ಆಂಜಿ, ಸುಬ್ರಮಣಿ, ಹನಮಂತು, ರ‍್ರಂವಾರಿಪಲ್ಲಿ ಗೌರಿಶಂಕರ, ವಾಟರ್ ಬೋರ್ಡ್ ಅಬಿಯಂತರ ಎ.ವಿ.ಸಂತೋಷ, ಜೆಎಂ ಕನ್ಸ್ಟ್ರಕ್ಷನ್ ಗುತ್ತಿಗೆದಾರ ಮೋಹನ್‌ನರಸಿಂಹಲು ಭಾಗವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಗ್ರಾಮದಲ್ಲಿ ಜಲಜೀವನ್ ಕುಡಿಯುವ ನೀರು ಯೋಜನೆಗೆ ಶಾಸಕ ವೆಂಕಟಶಿವಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್