ಬೆಂಗಳೂರು, 21 ನವೆಂಬರ್ (ಹಿ.ಸ.) :
ಆ್ಯಂಕರ್ : ನಮ್ಮ ರಾಜಧಾನಿ ಬೆಂಗಳೂರಿನ ಖ್ಯಾತಿ “ಬೆಂಗಳೂರು ಟೆಕ್ ಸಮಿಟ್” ಮೂಲಕ ವಿಶ್ವಮಟ್ಟದಲ್ಲಿ ಪಸರಿಸಿದೆ. ಅತ್ಯಾಧುನಿಕ ಹಾಗೂ ನಾವೀನ್ಯತೆಯ ಯೋಜನೆಗಳು ಭವಿಷ್ಯದಲ್ಲಿ ಜನೋಪಕಾರಿ ಯೋಜನೆಗಳಿಗೆ ನೆರವಾಗಲಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್-2024 ಶೃಂಗಸಭೆಯಲ್ಲಿ ನಾವೀನ್ಯತೆಗಾಗಿ ಮನ್ನಣೆ ಗಳಿಸಿರುವ ಸಂಸ್ಥೆಗಳಿಗೆ, ವೈಯಕ್ತಿಕ ಸಾಧಕರಿಗೆ ಸಚಿವರು ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಬೆಂಗಳೂರು ಟೆಕ್ ಸಮ್ಮಿಟ್ , ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನ, ಪ್ರಗತಿಯ ಮನೋಭಾವ ಸಮ್ಮಿಳಿತವಾಗಿರುತ್ತದೆ. ನಾವು ಉತ್ಕೃಷ್ಟತೆಯನ್ನು ಸಾಧಿಸಲು ಮುಂದಾಗಿದ್ದೇವೆ. ಈ ಟೆಕ್ ಸಮ್ಮಿಟ್ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa