ಇದೀಗ ರಾಜಸ್ಥಾನದಲ್ಲಿಯೂ ವಾಯುಮಾಲಿನ್ಯ 
ಜೈಪುರ, 20 ನವೆಂಬರ್(ಹಿ.ಸ.) : ಆ್ಯಂಕರ್ : ರಾಷ್ಟ್ರ ರಾಜಧಾನಿ ನವದೆಹಲಿ ಮಾತ್ರವಲ್ಲದೆ ಇದೀಗ ರಾಜಸ್ಥಾನದ ಕೆಲ ಜಿಲ್ಲೆಗಳಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ ಮಿತಿ ಮೀರಿದ್ದರಿಂದ ರಾಜಸ್ಥಾನದ ಖೈರ್ಥಾಲ್-ತಿಜಾರಾ ಜಿಲ್ಲೆಯಲ್ಲಿ ಇಂದು ಬುಧವಾರದಿಂದ ನವೆಂಬರ್ 23ರವರೆಗೆ ಶಾಲೆಗಳಿಗೆ ರಜೆ ನೀ
Now air pollution is also in Rajasthan.


ಜೈಪುರ, 20 ನವೆಂಬರ್(ಹಿ.ಸ.) :

ಆ್ಯಂಕರ್ : ರಾಷ್ಟ್ರ ರಾಜಧಾನಿ ನವದೆಹಲಿ ಮಾತ್ರವಲ್ಲದೆ ಇದೀಗ ರಾಜಸ್ಥಾನದ ಕೆಲ ಜಿಲ್ಲೆಗಳಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ ಮಿತಿ ಮೀರಿದ್ದರಿಂದ ರಾಜಸ್ಥಾನದ ಖೈರ್ಥಾಲ್-ತಿಜಾರಾ ಜಿಲ್ಲೆಯಲ್ಲಿ ಇಂದು ಬುಧವಾರದಿಂದ ನವೆಂಬರ್ 23ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.

1ರಿಂದ 5ನೇ ತರಗತಿಯ ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನ ಕುಸಿದಿದ್ದು, ಶೀತ ವಾತಾವರಣ ಹರಡಿದೆ. ಅಲ್ಲದೆ ಈಗ ಹಲವಾರು ನಗರಗಳಲ್ಲಿ ಮಾಲಿನ್ಯವು ಅಪಾಯದ ಮಟ್ಟವನ್ನು ದಾಟಿದ್ದರಿಂದ ಖೈರ್ಥಾಲ್ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.

ಭಿವಾಡಿ (ಖೈರ್ಥಾಲ್)ನಲ್ಲಿ ಗಾಳಿಯ ಗುಣಮಟ್ಟವು 380ರಷ್ಟು ಎಕ್ಯೂಐ ದಾಖಲಾಗಿದ್ದು, ಕರೌಲಿ ಮತ್ತು ಬಿಕಾನೇರ್ ನಲ್ಲಿಯೂ ಗಾಳಿಯ ಗುಣಮಟ್ಟ ಅಪಾಯಕಾರಿಯಾಗಿದೆ.

ಇನ್ನು ಸಿಕಾರ್, ಜುಂಜುನು, ಗಂಗಾನಗರ, ಟೋಂಕ್, ಬನ್ಸ್ ವಾರಾ, ದೌಸಾ, ಸವಾಯಿ ಮಾಧೋಪುರ್, ಕೋಟಾ, ಪ್ರತಾಪ್ ಗಢ ಮತ್ತು ಇತ್ಯಾದಿಗಳಲ್ಲಿ ಎಕ್ಯೂಐ 200ಕ್ಕಿಂತ ಹೆಚ್ಚಾಗಿದೆ. ರಾಜಸ್ಥಾನದ ಒಟ್ಟು 26 ಜಿಲ್ಲೆಗಳಲ್ಲಿ ಎಕ್ಯೂಐ 200ಕ್ಕಿಂತ ಹೆಚ್ಚಾಗಿದೆ. ಸಿರೋಹಿ, ರಾಜ್ ಸಮಂದ್, ಬಾರ್ಮರ್ ಮತ್ತು ಅಜ್ಮೀರ್ ಸೇರಿದಂತೆ ದಕ್ಷಿಣ ರಾಜಸ್ಥಾನದಲ್ಲಿ ಸ್ವಚ್ಛ ಗಾಳಿ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande