ಮುಂದುವರಿದ ಮಾಲಿನ್ಯ : ಮನೆಯಿಂದಲೇ ಕಚೇರಿ ಕೆಲಸ  
ನವದೆಹಲಿ, 20 ನವೆಂಬರ್(ಹಿ.ಸ.) : ಆ್ಯಂಕರ್ : ನವದೆಹಲಿಯ ಸರ್ಕಾರಿ ಕಚೇರಿಗಳ ಶೇ 50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ದೆಹಲಿ ಪರಿಸರ ಸಚಿವ ಮತ್ತು ಎಎಪಿ ಮುಖಂಡ ಗೋಪಾಲ್ ರಾಯ್ ಅವರು ಇಂದು ಬುಧವಾರ ಪ್ರಕಟಿಸಿದ್ದಾರೆ. ರಾಜಧಾನಿಯಲ್ಲಿ ಹೆಚ್ಚ
Continued pollution: Office work from home


ನವದೆಹಲಿ, 20 ನವೆಂಬರ್(ಹಿ.ಸ.) :

ಆ್ಯಂಕರ್ : ನವದೆಹಲಿಯ ಸರ್ಕಾರಿ ಕಚೇರಿಗಳ ಶೇ 50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ದೆಹಲಿ ಪರಿಸರ ಸಚಿವ ಮತ್ತು ಎಎಪಿ ಮುಖಂಡ ಗೋಪಾಲ್ ರಾಯ್ ಅವರು ಇಂದು ಬುಧವಾರ ಪ್ರಕಟಿಸಿದ್ದಾರೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಗೋಪಾಲ್ ರಾಯ್, ಮಾಲಿನ್ಯವನ್ನು ಕಡಿಮೆ ಮಾಡಲು, ದೆಹಲಿ ಸರ್ಕಾರವು ಸರ್ಕಾರಿ ಕಚೇರಿಗಳ ನೌಕರರಿಗೆ ಮನೆಯಿಂದಲೇ ಕಚೇರಿ ಕೆಲಸ ನೀಡಲು ನಿರ್ಧರಿಸಿದೆ. ಶೇ 50 ರಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲಿದ್ದಾರೆ. ಈ ಕ್ರಮದ ಅನುಷ್ಠಾನಕ್ಕಾಗಿ ಇಂದು ಸಚಿವಾಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಬರೆದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಬುಧವಾರ ಬೆಳಿಗ್ಗೆ 'ತೀವ್ರ ಕಳಪೆ' ಹಂತಕ್ಕೆ ತಲುಪಿದೆ. ನಗರದ ಕೆಲ ಭಾಗಗಳನ್ನು ತೆಳುವಾದ ಹೊಗೆ ಆವರಿಸಿದ್ದು, ಗೋಚರತೆ ಕಡಿಮೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande