ಅಮೇರಿಕ, 31 ಅಕ್ಟೋಬರ್ (ಹಿ.ಸ.):
ಆ್ಯಂಕರ್:ವಿಶ್ವದ ಪ್ರಮುಖ ತಂಪು ಪಾನೀಯ ಕಂಪನಿಗಳಲ್ಲಿ ಒಂದಾದ ಪೆಪ್ಸಿಕೋ ಅಮೆರಿಕದಲ್ಲಿರುವ ತನ್ನ ಕೆಲ ಘಟಕಗಳನ್ನು ಸ್ಥಗಿಗೊಳಿಸಲು ನಿರ್ಧರಿಸಿದೆ. ಕಂಪನಿಯ ಆದಾಯದಲ್ಲಿ ಗಣನೀಯ ಇಳಿಕೆಯಿಂದಾಗಿ ಕಂಪನಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಘಟಕಗಳ ಸ್ಥಗಿತದಿಂದ ಸುಮಾರು ೪೦೦ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.ಷೇರು ವಿನಿಮಯ ಕೇಂದ್ರಕ್ಕೆ ಕಂಪನಿ ನೀಡಿರುವ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್‌ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಘಟಕಗಳನ್ನು ವೆಚ್ಚ ಕಡಿತ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa