ಮುಂಬಯಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೫ರ ಹರಾಜು ಪ್ರಕ್ರಿಯೆಗೆ ಸಿದ್ದತೆಗಳು ಪ್ರಾರಂಭವಾಗಿವೆ. ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ನಾಳೆಯೊಳಗಾಗಿ ಸಲ್ಲಿಸಬೇಕಿದ್ದು ಅದಕ್ಕಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ.ನವೆಂಬರ್ ೨೪ ಹಾಗೂ ೨೫ ರಂದು ಸೌದಿ ಅರೇಬಿಯಾದ ರಾಜಧಾನಿ ರಿಯಾದನಲ್ಲಿ ಆಟಗಾರರ ಹರಾಜು ನಡೆಯಲಿದೆ.
ಈ ಬಾರಿ ಬಿಸಿಸಿಐ ಹರಾಜಿನಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಿದ್ದು ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರ ಕನಿಷ್ಠ ಮೊತ್ತವನ್ನು ೩೦ ಲಕ್ಷಕ್ಕೆ ನಿಗದಿಪಡಿಸಿದೆ. ಈ ಹಿಂದೆ ಕನಿಷ್ಠ ಮೊತ್ತ ೨೦ ಲಕ್ಷವಿತ್ತು.
ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರ ಮೊತ್ತ ಕನಿಷ್ಠ ೩೦ ಲಕ್ಷದಿಂದ ಪ್ರಾರಂಭವಾಗಿ ಗರಿಷ್ಠ ೨ ಕೋಟಿಗೆ ನಿಗದಿಪಡಿಸಿದೆ. ಈ ಮೂಲಕ ಹೊಸ ಆಟಗಾರರಿಗೆ ಉತ್ತಮ ಮೊತ್ತ ದೊರಕಿಸುವಲ್ಲಿ ಬಿಸಿಸಿಐ ಮುಂದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa