ನವದೆಹಲಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಯಿಂದಾಗುವ ಅನಾಹುತಗಳ ತಡೆಗೆ ದೇಶಾದ್ಯಂತ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಶೇಷ ತುರ್ತು ನಿಗಾ ಘಟಕವನ್ನು ಸಜ್ಜುಗೊಳಿಸಲಾಗಿದೆ.
ಏಮ್ಸ್ ಮತ್ತು ಸಪ್ಧರ್ ಜಂಗ್ ಆಸ್ಪತ್ರೆಯುಲ್ಲಿಯೂ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಹಲವು ನಗರಗಳಲ್ಲಿ ಪಟಾಕಿ ಅನಾಹುತ ತಡೆಗೆ ಮುನ್ನೆಚ್ಚರಿಕೆ ಕೈಗೊಳ್ಳಾಗಿದೆ. ಈ ಬಾರಿ ಹಸಿರು ಪಟಾಕಿಗೆ ಆದ್ಯತೆ ನೀಡಿದ್ದು, ಆರಂಭಿಕ ಹಂತದಲ್ಲಿ ಪಟಾಕಿಯ ಅಬ್ಬರ ತಗ್ಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯ ಸುಟ್ಟ ಗಾಯಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಸಮೀಕ್ ಭಟ್ಟಾಚಾರ್ಯ, ತುರ್ತು ಚಿಕಿತ್ಸೆಗಾಗಿ ೧೫ ಹಾಸಿಗೆಗಳ ವಾರ್ಡ್ ಅನ್ನು ಸಜ್ಜುಗೊಳಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಚಿಕಿತ್ಸೆ ನೀಡಲು ವೈದ್ಯಕೀಯ ತಂಡ ಸಿದ್ಧವಾಗಿದೆ ಎಂದರು.
ಏಮ್ಸ್ ನ ತಜ್ಞ ವೈದ್ಯ ಡಾ. ಮನೀಶ್ ಸಿಂಘಾಲ್ ಮಾತನಾಡಿ, ಪಟಾಕಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕಿವಿ ಮಾತು ಹೇಳಿದರು. ಬೆಳಕಿನ ಹಬ್ಬ ಜನರ ಬಾಳಿನಲ್ಲಿ ಅಂಧಕಾರ ತರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್