ಮಂಡ್ಯ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧೆಡೆ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಶಾಸಕ ಹೆಚ್.ಟಿ.ಮಂಜು ಪರಿಶೀಲನೆ ನಡೆಸಿದರು.
ಹಾನಿಗೊಳಗಾದ ಬೆಳೆ, ರಸ್ತೆ, ಸೇತುವೆ ಹಾಗೂ ಭೂ ಕುಸಿತವನ್ನು ಪರಿಶೀಲಿಸಿದ ಅವರು, ಶೀಘ್ರದಲ್ಲೇ ಅಂದಾಜು ಪಟ್ಟಿ ತಯಾರಿಸಿ, ಸರ್ಕಾರಕ್ಕೆ ನಷ್ಟದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು. ಇದೇ ವೇಳೆ, ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್