ಜೀನಿವಾ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತರಬೇತಿ ವೇಳೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ 19 ವರ್ಷದ ಇಟಾಲಿಯನ್ ಅಥ್ಲೀಟ್ ಮಟಿಲ್ಡೆ ಲೊರೆಂಜಿ ಅವರ ನಿಧನಕ್ಕೆ ಅಂತಾರಾಷ್ಟ್ರೀಯ ಸ್ಕೀ ಮತ್ತು ಸ್ನೋಬೋರ್ಡ್ ಫೆಡರೇಶನ್ ಸಂತಾಪ ಸೂಚಿಸಿದೆ.
ಮಟಿಲ್ಡೆ ಲೊರೆಂಜಿ ಅವರ ನಿಧನದಿಂದ ಕ್ರೀಡಾ ಲೋಕ ಓರ್ವ ಪ್ರತಿಭಾನ್ವಿತ ಕ್ರೀಡಾ ಪಟುವನ್ನು ಕಳೆದುಕೊಂಡಿದೆ ಎಂದು ಫೆಡರೇಶನ್ ಹೇಳಿದೆ.
ಲೊರೆಂಜಿ ಸೋಮವಾರ ಇಟಲಿಯ ಟೈರೋಲ್‌ನಲ್ಲಿರುವ ಸ್ಕ್ನಾಲ್‌ಸ್ಟಾಲ್ ಹಿಮನದಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಲೊರೆಂಜಿ ನಿಧನರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa