ದೇವಿರಮ್ಮ ಜಾತ್ರಾ ಮಹೋತ್ಸವ
ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವಿರಮ್ಮ ಜಾತ್ರಾ ಮಹೋತ್ಸವ; ಇಂದು ಸಂಜೆಯಿಂದ ಬೆಟ್ಟವೇರಲು ಜಿಲ್ಲಾಡಳಿತ ಅವಕಾಶ
ದೇವಿರಮ್ಮ ಜಾತ್ರಾ ಮಹೋತ್ಸವ


ಚಿಕ್ಕಮಗಳೂರು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ದೇವಿರಮ್ಮ ಬೆಟ್ಟದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಇಂದು ಸಂಜೆಯಿಂದ ನಾಳೆ ಸಂಜೆವರೆಗೂ ಭಕ್ತರು ಬೆಟ್ಟವೇರಿ ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ.

ಜಿಲ್ಲಾ ಪೊಲೀಸ್ ಅಧಿಕ್ಷಕ ವಿಕ್ರಂ ಅಮಾಟೆ ಮಾತನಾಡಿ ಈ ಬಾರಿ ಸುಮಾರು ೧ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬಂದೋಬಸ್ತಿಗೆ ಸುಮಾರು ೮೦೦ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಬೆಟ್ಟದ ಮೇಲೆ ಪ್ಲಾಸ್ಟಿಕ್ ಬಳಸುವುದು. ಪಠಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಭಕ್ತರು ಎಚ್ಚರಿಕೆಯಿಂದ ಬೆಟ್ಟವೇರಿ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande