ನಾನೀಗ ಜಪಾನ್ ದೇಶದಲ್ಲಿದ್ದೇನೆ. ಇಲ್ಲಿನ ಜನರು ಚಿತ್ರಕಲೆಗೆ ವಿಶೇಷ ಸ್ಥಾನ ಕೊಟ್ಟಿದ್ದಾರೆ. ಮಂಗಾ ಕಲೆ ಇಲ್ಲಿನ ವಿಶೇಷತೆ. ಈ ಕಲೆಯ ಚಿತ್ರ ಕಾರರಿಗೆ ಮಂಗಾಕ ಎಂದು ಕರೆಯುತ್ತಾರೆ. ಇವು ಮತ್ತೇನೂ ಅಲ್ಲ, ನಮ್ಮಲ್ಲಿನ ಸಚಿತ್ರ ಕಥಾಸಂಕಲನ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲಕರಿಂದ ಹಿಡಿದು ಮುದುಕರ ವರೆಗೂ ಇವುಗಳನ್ನು ಓದುವುದು ಒಂದು ಹವ್ಯಾಸ. ಒಂದು ಕಾಲಕ್ಕೆ ನಮ್ಮಲ್ಲಿ ಕಾದಂಬರಿಗಳು/ಕಾದಂಬರಿಕಾರರಿಗೆ ಇದ್ದ ಮಹತ್ವ ಎನ್ನಬಹುದು. ಕಾಲ ಬದಲಾದಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಾರ್ಟೂನ್ ಚಿತ್ರಗಳಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿವೆ. ನಮ್ಮ ದೇಶದಲ್ಲಿಯೂ ಮಕ್ಕಳು ಟಿ ವಿ/ ಮೊಬೈಲ್ ಗಳಲ್ಲಿ ಹೆಚ್ಚಿನ ಸಮಯ ಕಾರ್ಟೂನ್ ಸೀರಿಯಲ್ ನೋಡುವುದನ್ನು ನಾವು ಕಾಣುತ್ತೇವೆ.
ಈ ವ್ಯಂಗ್ಯಚಿತ್ರ ಕಾರರು ಹುಟ್ಟು ಹಾಕಿದ ಪಾತ್ರಗಳು ನಾನಾ ಬಗೆಯ ಪದಾರ್ಥಗಳಿಂದ ತಯಾರಾದ, ಮಕ್ಕಳಿಗೆ ಆಟಿಗೆಗಳಾಗಿ, ಮನೆಯ ಶೋ ಕೇಸ್ ಸಿಂಗರಿಸುವ ವಸ್ತುಗಳಾಗಿ , ಇಲ್ಲವೇ ದಿನನಿತ್ಯ ಬಳಸಬಹುದಾದ ಉಪಯುಕ್ತ ಸಲಕರಣೆ ಗಳಾಗಿ ಬಹುದೊಡ್ಡ ಮಾರುಕಟ್ಟೆ ಆಕ್ರಮಿಸಿವೆ. ಪೇಟೆಂಟ್ ಹೊಂದಿರುವ ವ್ಯಂಗ್ಯಚಿತ್ರ ಕಾರರಿಗೆ ಉತ್ತಮ ಆದಾಯ ಒದಗಿಸುವಲ್ಲಿ ತುಂಬಾ ಸಹಾಯಕವಾಗಿವೆ. ನಮ್ಮಲ್ಲಿ ಇತ್ತೀಚೆಗೆ ಛೋಟಾ ಭೀಮ ಮಾರುಕಟ್ಟೆಯಲ್ಲಿ ನೋಡಿದ್ದೆ, ಆದರೆ ಇಲ್ಲಿ ನೂರಾರು ಪಾತ್ರಗಳು ರಾರಾಜಿಸುತ್ತಿವೆ. ನನ್ನ ವ್ಯಂಗ್ಯಚಿತ್ರಕಾರ ಮಿತ್ರರಿಗಾಗಿ ಇಲ್ಲಿವೆ ಕೆಲವು ಛಾಯಾಚಿತ್ರಗಳು.
-ಚೆನ್ನು ಮಠದ್.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ