ಎಸ್​ಬಿಐ ಅತ್ಯುತ್ತಮ ಭಾರತೀಯ ಬ್ಯಾಂಕ್
ನವದೆಹಲಿ, 28 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024ರ ವರ್ಷದಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಅಮೆರಿಕದ ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ ಪರಿಗಣಿಸಿ ಪ್ರಶಸ್ತಿ ನೀಡಿದೆ. ಅಮೆರಿಕದ ವಾಷಿಂಗ್ಟನ್​ನಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್​ನ ವಾರ್ಷಿಕ ಸಭೆ ನಡುವಲ್ಲ
ೇವಗ


ನವದೆಹಲಿ, 28 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024ರ ವರ್ಷದಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಅಮೆರಿಕದ ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ ಪರಿಗಣಿಸಿ ಪ್ರಶಸ್ತಿ ನೀಡಿದೆ. ಅಮೆರಿಕದ ವಾಷಿಂಗ್ಟನ್​ನಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್​ನ ವಾರ್ಷಿಕ ಸಭೆ ನಡುವಲ್ಲಿ ಆಯೋಜಿಸಲಾದ 31ನೇ ವಾರ್ಷಿಕ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಎಸ್​ಬಿಐ ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಎಸ್​ಬಿಐನ ಛೇರ್ಮನ್ ಸಿಎಸ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು. ಗ್ರಾಹಕರಿಗೆ ಅಸಾಧಾರಣ ಸೇವೆ ಒದಗಿಸಲು ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಎಸ್​ಬಿಐ ತೋರುತ್ತಿರುವ ಬದ್ಧತೆಗೆ ಸಿಕ್ಕ ಒಂದು ಗೌರವ ಇದು ಎಂದು ಈ ಸಂದರ್ಭದಲ್ಲಿ ಎಸ್​ಬಿಐ ಹೇಳಿಕೆ ನೀಡಿದೆ.

ಜೆಪಿ ಮಾರ್ಗನ್ ಚೇಸ್ ವಿಶ್ವದ ಅತ್ಯುತ್ತಮ ಬ್ಯಾಂಕ್

ಅಮೆರಿಕದ ಜೆಪಿ ಮಾರ್ಗನ್ ಚೇಸ್ 2024ರಲ್ಲಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಅತ್ಯುತ್ತಮ ಇನ್ವೆಸ್ಟ್​ಮೆಂಟ್ ಬ್ಯಾಂಕ್ ಮತ್ತು ಅತ್ಯುತ್ತಮ ಖಾಸಗಿ ಬ್ಯಾಂಕ್ ಎನ್ನುವ ಗೌರವವೂ ಅದಕ್ಕೆ ಸಿಕ್ಕಿದೆ. ಅಮೆರಿಕದ ಬ್ಯಾಂಕುಗಳ ಸರಣಿ ಕುಸಿತವನ್ನು ತಡೆಯಲು ಚೇಸ್ ವಹಿಸಿದ ಪಾತ್ರ ಮಹತ್ತರವಾದುದು. ಇದನ್ನು ಪರಿಗಣಿಸಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎಂದು ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ 2024 ವಿಶ್ವದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಅತ್ಯುತ್ತಮ ಬ್ಯಾಂಕು: ಜೆಪಿ ಮಾರ್ಗನ್ ಚೇಸ್ಅತ್ಯುತ್ತಮ ಕಾರ್ಪೊರೇಟ್ ಬ್ಯಾಂಕ್: ಬಿಬಿವಿಎಅತ್ಯುತ್ತಮ ಕನ್ಸೂಮರ್ ಬ್ಯಾಂಕ್: ಸ್ಟಾಂಡರ್ಡ್ ಚಾರ್ಟರ್ಡ್ಅತ್ಯುತ್ತಮ ಉದಯೋನ್ಮುಖ ಮಾರುಕಟ್ಟೆಗಳ ಬ್ಯಾಂಕ್: ಕ್ಯೂಎನ್​ಬಿಅತ್ಯುತ್ತಮ ಫ್ರಾಂಟಿಯರ್ ಮಾರ್ಕೆಟ್ ಬ್ಯಾಂಕ್: ಯುಬಿಎಅತ್ಯುತಮ ಸಬ್-ಕಸ್ಟಡಿಯನ್ ಬ್ಯಾಂಕ್: ಸಿಐಬಿಸಿ ಮೆಲ್ಲೋನ್ಅತ್ಯುತ್ತಮ ಟ್ರಾನ್ಸಾಕ್ಷನ್ ಬ್ಯಾಂಕ್: ಬ್ಯಾಂಕ್ ಆಫ್ ಅಮೆರಿಕಅತ್ಯುತ್ತಮ ಸಸ್ಟೈನಬಲ್ ಫೈನಾನ್ಸ್ ಬ್ಯಾಂಕ್: ಸೊಸೈಟೆ ಜನರೇಲ್ಅತ್ಯುತ್ತಮ ಇಸ್ಲಾಮಿಕ್ ಫೈನಾನ್ಷಿಯಲ್ ಇನ್ಸ್​ಟಿಟ್ಯೂಶನ್: ಕುವೇತ್ ಫೈನಾನ್ಸ್ ಹೌಸ್ಅತ್ಯುತ್ತಮ ಕ್ಯಾಷ್ ಮ್ಯಾನೇಜ್ಮೆಂಟ್ ಬ್ಯಾಂಕ್: ಸಿಟಿ ಬ್ಯಾಂಕ್ಅತ್ಯುತ್ತಮ ಫಾರೀನ್ ಎಕ್ಸ್​ಚೇಂಜ್ ಸರ್ವಿಸ್: ಯುಬಿಎಸ್ಅತ್ಯುತ್ತಮ ಎಸ್​ಎಂಇ ಬ್ಯಾಂಕ್: ಬಿಟಿಜಿ ಪ್ಯಾಕ್ಚುಯಲ್ ಎಂಪ್ರೆಸಾಸ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande