ಪುಣೆ ಬಳಿ ಕಾರಿನಲ್ಲಿ 5 ಕೋಟಿ ರೂ. ನಗದು ಜಪ್ತಿ
ಪುಣೆ ,22ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಾವು ಹೆಚ್ಚಿರುವ ಮಧ್ಯೆ ಪುಣೆ ಪೊಲೀಸರು ಬಂದೋಬಸ್ತ್​​ ವೇಳೆ ಕಾರ್​​ನಲ್ಲಿ 5 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಶಿವಪುರ್​ ಟೋಲ್​ ಬೂತ್​ನಲ್ಲಿ ಕಾರ್​ನಲ್ಲಿ ಅನಾಮಧೇಯ ಹಣ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ
ಿ್ೇಿೇಿ


ಪುಣೆ ,22ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಾವು ಹೆಚ್ಚಿರುವ ಮಧ್ಯೆ ಪುಣೆ ಪೊಲೀಸರು ಬಂದೋಬಸ್ತ್​​ ವೇಳೆ ಕಾರ್​​ನಲ್ಲಿ 5 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಶಿವಪುರ್​ ಟೋಲ್​ ಬೂತ್​ನಲ್ಲಿ ಕಾರ್​ನಲ್ಲಿ ಅನಾಮಧೇಯ ಹಣ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಣದ ಕುರಿತು ಮಾತನಾಡಿರುವ ಯುಬಿಟಿ ನಾಯಕ ಸಂಜಯ್​ ರಾವತ್​, ಹೆಸರನ್ನು ಉಲ್ಲೇಖಿಸಿದೆ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರನ್ನು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾವತ್​, ’’ಏಕನಾಥ್​ ಶಿಂಧೆ ಅವರು 75 ಕೋಟಿಯನ್ನು ಪ್ರತಿ ಶಾಸಕರಿಗೆ ಕಳುಹಿಸಿದ್ದು, ಇದು ಅದರ ಮೊದಲ ಕಂತಾಗಿದೆ‘‘ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ನವೆಂಬರ್​ 20ಕ್ಕೆ ಏಕಹಂತದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಂಬೈ - ಬೆಂಗಳೂರು ಹೆದ್ದಾರಿಯಲ್ಲಿನ ಶಿವಪುರ ಗ್ರಾಮದ ಟೊಲ್​ ಬೂತ್​ನಲ್ಲಿ ಪುಣೆ ಗ್ರಾಮಾಂತರ ಪೊಲೀಸರು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande