ರಾಷ್ಟ್ರೀಯ ಮಟ್ಟದ ಅಮರಾವತಿ ಡ್ರೋನ್ ಶೃಂಗಸಭೆ ೨೦೨೪
ಅಮರಾವತಿ, 22ಅಕ್ಟೋಬರ್(ಹಿ.ಸ.) : ಆ್ಯಂಕರ್ : ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಮರಾವತಿ ಡ್ರೋನ್ ಶೃಂಗಸಭೆ ೨೦೨೪ ಇಂದು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ ರಾಮ್ ಮೋಹನ್
ರಾಷ್ಟ್ರೀಯ ಮಟ್ಟದ ಅಮರಾವತಿ ಡ್ರೋನ್ ಶೃಂಗಸಭೆ ೨೦೨೪


ಅಮರಾವತಿ, 22ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಮರಾವತಿ ಡ್ರೋನ್ ಶೃಂಗಸಭೆ ೨೦೨೪ ಇಂದು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಆರಂಭವಾಗಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ ರಾಮ್ ಮೋಹನ್ ನಾಯ್ಡು ಭಾಗವಹಿಸಲಿದ್ದಾರೆ.

ಆಂಧ್ರ ಪ್ರದೇಶದ ಡ್ರೋನ್ ಕಾರ್ಪೊರೇಷನ್ ಆಯೋಜಿಸಿರುವ ಪ್ರಮುಖ ಅಮರಾವತಿ ಡ್ರೋನ್ ಶೃಂಗಸಭೆಯಲ್ಲಿ ೧೦೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಪ್ರದರ್ಶಕರು ಭಾಗವಹಿಸಲಿದ್ದಾರೆ.

ಈ ಶೃಂಗಸಭೆಯು ನಾಗರಿಕ ವಿಮಾನಯಾನ ಸಚಿವಾಲಯ, ರಕ್ಷಣಾ ವಲಯ, ಭಾರತೀಯ ಕೈಗಾರಿಕಾ ಒಕ್ಕೂಟ, ಸಂಶೋಧನಾ ವಿದ್ವಾಂಸರು ಮತ್ತು ಕ್ಷೇತ್ರದ ಉದ್ಯಮಿಗಳನ್ನು ಒಟ್ಟುಗೂಡಿಸುತ್ತದೆ. ಶೃಂಗಸಭೆಯು ಡ್ರೋನ್ ತಯಾರಿಕೆಯಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande