ಹುಬ್ಬಳ್ಳಿ : ದ್ವಿಚಕ್ರ ವಾಹನ ಕಳ್ಳನ ಬಂಧನ
ಹುಬ್ಬಳ್ಳಿ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದ್ವಿಚಕ್ರ ವಾಹನ ಕಳ್ಳತನ ಸಂಬಂಧ ಹುಬ್ಬಳ್ಳಿ ಉಪ ನಗರ ಠಾಣೆ ಪೋಲಿಸರು ಓರ್ವನನ್ನು ಬಂಧಿಸಿದ್ದು, ಬಂಧಿತನಿಂದ ೧೨ ದ್ವಿಚಕ್ರ ವಾಹನ ಹಾಗೂ ೧ಲಕ್ಷ ೧೦ ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿ
Arrest


Arrest


ಹುಬ್ಬಳ್ಳಿ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದ್ವಿಚಕ್ರ ವಾಹನ ಕಳ್ಳತನ ಸಂಬಂಧ ಹುಬ್ಬಳ್ಳಿ ಉಪ ನಗರ ಠಾಣೆ ಪೋಲಿಸರು ಓರ್ವನನ್ನು ಬಂಧಿಸಿದ್ದು, ಬಂಧಿತನಿಂದ ೧೨ ದ್ವಿಚಕ್ರ ವಾಹನ ಹಾಗೂ ೧ಲಕ್ಷ ೧೦ ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದರಿ ಕಳ್ಳತನ ಪ್ರಕರಣವನ್ನು ಭೇದಿಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ ಎಮ್.ಎಸ್.ಹೂಗಾರ ರವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.

ಸದರಿ ತಂಡವು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಹುಬ್ಬಳ್ಳಿಯ ಆನಂದ ನಗರದ ಮಹಾಂತೇಶ ಕಲಾಲ ಎಂಬ ಆರೋಪಿತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿತನಿಂದ ಕಳ್ಳತನವಾಗಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ವೇಳೆ ಇದೇ ಆರೋಪಿತನು ಮತ್ತಷ್ಟು ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಕುರಿತು ಮಾಹಿತಿ ನೀಡಿದ್ದಾನೆ.ಬಂಧಿತನಿಂದ 5,80,000/- ರೂ ಮೌಲ್ಯದ ವಿವಿಧ ಕಂಪನಿಗಳ 12 ದ್ವಿಚಕ್ರ ವಾಹನ ಮತ್ತು 1,10,000/- ರೂ ನಗದು ಸೇರಿದಂತೆ ಒಟ್ಟು 6,90,000/-ರೂ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯವನ್ನು ನಿರ್ವಹಿಸಿದ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಮ್.ಎಸ್.ಹೂಗಾರ, ಪಿ.ಎಸ್.ಐ ದೇವಿಂದ್ರ ಮಾವಿನಂಡಿ, ಮಲ್ಲಿಕಾರ್ಜುನ ಹೊಸೂರ ಮತ್ತು ಸಿಬ್ಬಂದಿಗಳಾದ ಗೂಳೇಶ ಎಚ್.ಎಮ್. ಎಸ್.ವಿ ಯರಗುಪ್ಪಿ, ನಾಗರಾಜ ಗುಡಿಮನಿ, ಪಿ.ಎಲ್ ಗೋವಿಂದಪ್ಪನವರ, ಪ್ರಕಾಶ ಕೆಲಗುಡಿ, ಎಮ್.ಎಚ್ ಹಾಲವರ, ಎಸ್.ಬಿ ಯಳವತ್ತಿ, ಡಿ.ಆರ್ ಪಮ್ಮಾರ, ಎ.ಎಚ್ ಡೊಳ್ಳಿನ, ಟಿ.ವೈ.ಗಡ್ಡದವರ, ನೆಹರೂ ಲಮಾಣಿ, ಆರ್.ಎಚ್ ಸಿಕ್ಕಲಗೇರಿ, ಜ್ಞಾನೇಶ್ವರ ಮಾಂಗ ರವರನ್ನೊಳಗೊಂಡ ತಂಡದ ಕಾರ್ಯಕ್ಕೆ ಪೋಲಿಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande