ನಾಳೆಯಿಂದ ಎರಡು ದಿನ ಹುಬ್ಬಳ್ಳಿಯಲ್ಲಿ ಸೊಪ್ಪು ಮೇಳ
ಹುಬ್ಬಳ್ಳಿ, 18 ಅಕ್ಟೋಬರ್ (ಹಿ.ಸ.) ಆ್ಯಂಕರ್:ಔಷಧೀಯ ಖಜಾನೆ ನಿಸರ್ಗದ ಕೊಡುಗೆಯಾದ ಸೊಪ್ಪುಗಳ ವೈವಿಧ್ಯತೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ‌ ಕಾಲ ಹುಬ್ಬಳ್ಳಿಯಲ್ಲಿ ಸೊಪ್ಪು ಮೇಳ ನಡೆಯಲಿದೆ. ಸಹಜ ಸಮೃದ್ಧ ಆಯೋಜಿಸಿರುವ ಮೇಳದಲ್ಲಿ ವಿವಿಧ ಬಗೆಯ ಸೊಪ್ಪುಗಳ ಪ್ರದರ್ಶನ ಮತ್ತು ಮಾರಾಟ
Green fair


ಹುಬ್ಬಳ್ಳಿ, 18 ಅಕ್ಟೋಬರ್ (ಹಿ.ಸ.)

ಆ್ಯಂಕರ್:ಔಷಧೀಯ ಖಜಾನೆ ನಿಸರ್ಗದ ಕೊಡುಗೆಯಾದ ಸೊಪ್ಪುಗಳ ವೈವಿಧ್ಯತೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ‌ ಕಾಲ ಹುಬ್ಬಳ್ಳಿಯಲ್ಲಿ ಸೊಪ್ಪು ಮೇಳ ನಡೆಯಲಿದೆ.

ಸಹಜ ಸಮೃದ್ಧ ಆಯೋಜಿಸಿರುವ ಮೇಳದಲ್ಲಿ ವಿವಿಧ ಬಗೆಯ ಸೊಪ್ಪುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಗರದ ಮೂರು ಸಾವಿರ ಮಠದ ಸಭಾಭವನದಲ್ಲಿ ಮೇಳ ನಡೆಯಲ್ಲಿದ್ದು, ಗೋಕರ್ಣದ ಕೆಂಪು ಹರಿವೆ, ನಾಗರಹೊಳೆ ಕಾಡಿನ ಬೆರಕೆ ಸೊಪ್ಪು, ಮಲೆನಾಡಿನ ಔಷಧೀಯ ಸೊಪ್ಪುಗಳು, ಉತ್ತರ ಕರ್ನಾಟಕದ ತಪ್ಪಲು ಪಲ್ಲೆ ,ಹೊಸ ತಲೆಮಾರಿನ ಲೆಟ್ಯೂಸ್ ನಂಥ ಸೊಪ್ಪುಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಇದೇ ವೇಳೆ ಸೊಪ್ಪಿನಿಂದ ತಯಾರಿಸಿದ ಅಡುಗೆಗಳನ್ನು ಪ್ರದರ್ಶಿಸಲು ಆಸಕ್ತ ಪಾಕ ಪ್ರವೀಣರು ಮೇಳದಲ್ಲಿ ಭಾಗವಹಿಸಬಹದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಳದಲ್ಲಿ ಭಾಗವಹಿಸಲು ಆಸಕ್ತರು ಪ್ರಕಾಶ್ ಹಿರೇಮಠ್ ದೂರವಾಣಿ -‭9538691868‬ ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande