ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ದ್ರಾಕ್ಷಿ ಬೆಳೆಗಾರರಿಗೆ ಸಲಹೆ
ಕೊಪ್ಪಳ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸತತ ತುಂತುರು ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ದ್ರಾಕ್ಷಿ ಬೆಳೆಗೆ ವಿವಿಧ ರೋಗಗಳು ಕಂಡು ಬಂದಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಜ್ಞಾನಿಗಳು ಇತ್ತೀಚೆಗೆ ತಾಲ್ಲೂಕಿನದ್ಯಾಂತ ದ್ರ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ರೋಗದ ಬಾಧೆ ನಿಯಂತ್
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ದ್ರಾಕ್ಷಿ ಬೆಳೆಗಾರರಿಗೆ ಸಲಹೆ


ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ದ್ರಾಕ್ಷಿ ಬೆಳೆಗಾರರಿಗೆ ಸಲಹೆ


ಕೊಪ್ಪಳ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸತತ ತುಂತುರು ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ದ್ರಾಕ್ಷಿ ಬೆಳೆಗೆ ವಿವಿಧ ರೋಗಗಳು ಕಂಡು ಬಂದಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಜ್ಞಾನಿಗಳು ಇತ್ತೀಚೆಗೆ ತಾಲ್ಲೂಕಿನದ್ಯಾಂತ ದ್ರ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ರೋಗದ ಬಾಧೆ ನಿಯಂತ್ರಿಸಲು ದ್ರಾಕ್ಷಿ ಬೆಳೆಗಾರರಿಗೆ ಸಲಹೆಗಳನ್ನು ನೀಡಿದ್ದಾರೆ.

ಸತತ ಮಳೆಯಿಂದಾಗಿ ದ್ರಾಕ್ಷಿ ಬೆಳೆಯಲ್ಲಿ ಬೂಜುತುಪ್ಪಟ ರೋಗ, ಚಿಬ್ಬುರೋಗ ಅಲ್ಲದೇ ಕಾಳುಕೊಳೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಚಾಟಣಿ ಮಾಡಿದ ತೋಟಗಳಲ್ಲಿ ಈ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಮಳೆಯಿಂದಾಗಿ ಶೇಕಡಾ 40 ರಷ್ಟುದ್ರಾಕ್ಷಿ ಬೆಳೆಗಳನ್ನು ಇನ್ನೂ ಚಾಟಣಿ ಮಾಡಲು ಅವಕಾಶ ಸಿಕ್ಕಿಲ್ಲ ಇದರಿಂದಾಗಿ ಇಳುವರಿ ಮೇಲೆ ದುಷ್ಪರಿಣಾಮ ಆಗಬಹುದು ಆದ್ದರಿಂದ ದ್ರಾಕ್ಷಿ ಬೆಳೆಗಾರರು ಅಕ್ಟೋಬರ ತಿಂಗಳಿನಲ್ಲಿಯೇ ಚಾಟಣಿ ಮಾಡಬೇಕು.

ಚಾಟಣಿ ಮಾಡುವಾಗ ರೋಗಗ್ರಸ್ತ ಬಳ್ಳಿಯ ಭಾಗಗಳನ್ನು ಕತ್ತರಿಸಿ ಹಾಕಬೇಕು,. ರೋಗಗ್ರಸ್ತ ಎಲೆ ಕಡ್ಡಿಗಳನ್ನು ಆಯ್ದು ನಾಶಮಾಡಬೇಕು. ಚಿಗುರುಗಳನ್ನು ತೆಗೆಯುತ್ತಿರಬೇಕು. ಚಾಟಣಿ ಮಾಡಿದ 2 ದಿನಗಳೊಳಗೆ ಶೇಕಡಾ 1 ರ ಬೋರ್ಡೊ ದ್ರಾವಣವನ್ನು ಸಿಂಪರಿಸಬೇಕು. ಚಾಟಣಿ ಮಾಡದೇ ಉಳಿದಿರುವ ಬಳ್ಳಿಗಳನ್ನು ಶೇಕಡಾ 0.5 ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

ಕರಪಾ, ಚಿಬ್ಬು ರೋಗವನ್ನು ಹತೋಟಿಗೆ ತರಲು ಥೈಯೋಫಿನೈಟ್ ಮಿಥೈಲ್ 2 ಗ್ರಾಂ. ಅಚಿvಚಿ ಕಾರ್ಬನ್‍ಡೈಜಿಮ್1 ಗ್ರಾಂ. ಎನ್ನುವ ಶಿಲಿಂದ್ರನಾಶಕಗಳನ್ನು ಸಿಂಪಡಿಸಬೇಕು. ಬೂಜುತುಪ್ಪಟ ರೋಗ ನಿಯಂತ್ರಿಸಲು ಫಾಸ್ಟೀಲ್ ಅಲೂಮಿನಿಯಂ 2 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರ ನಂತರ ಪರಿಣಾಮಕಾರಿ ಹತೋಟಿಗಾಗಿ ಸಂಯುಕ್ತ ಶಿಲೀಂದ್ರ ನಾಶಕಗಳಾದ ಮೆಲೋಡಿಡ್ಯುಯೋ 3 ಗ್ರಾಂ. ಅಥವಾ ರಿಡೊಮೀಲ್‍ಗೋಲ್ಡ್ 2.5 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಮುಂಜಾಗ್ರತ ಕ್ರಮವಾಗಿ ಡಾರ್ಮೆಕ್ಸ್ ಲೇಪಿಸುವಾಗ 1 ಲೀಟರ ದ್ರಾವಣಕ್ಕೆ 6 ಗ್ರಾಂ. ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಬೆರೆಸಿ ಲೇಪಿಸಬೇಕು. ಅದೇ ರೀತಿ ಚಾಟಣಿ ಮಾಡಿದ 25-30ದಿನಗಳ ಅಂತರದಲ್ಲಿ ಜಿ.ಎ. ಬಳಸುವಾಗ 1 ಲೀಟರದ್ರಾವಣದಲ್ಲಿ 3 ಗ್ರಾಂ. ಅಲಿಯಟ್ ಬೆರೆಸಿ ಸಿಂಪಡಿಸಬೇಕು. ಆಲ್ಟರ್ನೆರಿಯಾ ಮತ್ತು ಇತರೆ ಶಿಲೀಂದ್ರಗಳಿಂದ ಹರಡುವ ಕೊಳೆ ರೋಗಕ್ಕೆ ಡೈಫೆನ್‍ಕೊನೋಜೊಲ್ 0.5 ಮಿಲೀ. ಪ್ರಮಾಣದಲ್ಲಿ ಸಿಂಪಡಿಸಬೇಕು.

ಇದಲ್ಲದೇ 15 ದಿನಗಳ ಅಂತರದಲ್ಲಿ ದ್ರವರೂಪದ ಟ್ರೈಕೊಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು. ತೇವಾಂಶ ಹೆಚ್ಚಾದಾಗ ಬ್ಲೋವರ್‍ನಿಂದ ಗಾಳಿ ಬೀಸುತ್ತಾ ತೇವಾಂಶವನ್ನು ಹೋಗಲಾಡಿಸಬೇಕು.

ಮುಖ್ಯವಾಗಿ ರೈತರು ಮಣ್ಣು ಮತ್ತು ಎಲೆ ವಿಶ್ಲೇಷಣೆ ಆಧಾರದ ಮೇಲೆ ಗೊಬ್ಬರಗಳನ್ನು ತಜ್ಞರ ಸಲಹೆಯಂತೆ ಬಳಸಬೇಕು. ಲಘು ಪೋಷಕಾಂಶಗಳನ್ನು ಸಗಣಿ ಬಗ್ಗಡದಲ್ಲಿ ಮಿಶ್ರ ಮಾಡಿ ಹನಿ ನೀರಾವರಿ ಮೂಲಕ ಬಿಡುತ್ತಿರಬೇಕು. ಜೀವಾಮೃತ, ಗೋಕೃಪಾಮೃತ ದ್ರಾವಣವನ್ನು ಬಳಸುತ್ತಿರುವುದು ಸೂಕ್ತ ಹಾಗೂ ದ್ರಾಕ್ಷಿ ಬೆಳೆಗಾರರು ಈ ಎಲ್ಲಾ ಸಲಹೆಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande