ಕೋಲಾರದ ಅಂತರಗಂಗಾ ಸಂಸ್ಥೆಯಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ
ಕೋಲಾರದ ಅಂತರಗಂಗಾ ಸಂಸ್ಥೆಯಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ
ಕೋಲಾರದ ಅಂತರಗಂಗಾ ವಿದ್ಯಾಸಂಸ್ಥೆಯಲ್ಲಿ ವಿಶ್ವ ವಸತಿ ರಹಿತರ ದಿನ ಆಚರಿಸಲಾಯಿತು.


ಕೋಲಾರ ಅ.೧೧ (ಹಿ.ಸ) :

ಆಂಕರ್ : ವಿಶ್ವ ವಸತಿರಹಿತರ ದಿನಾಚರಣೆ ಅಂಗವಾಗಿ ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆ ಕೋಲಾರ ಹಾಗೂ ನಗರಸಭೆ ಕೋಲಾರದ ಡೇ-ನಲ್ಮ್ ಯೋಜನೆಯ ಇಲಾಖೆಯ ಸಹಕಾರದೊಂದಿಗೆ ಅಂತರಗಂಗಾ ವಿದ್ಯಾ ಸಂಸ್ಥೆಯ ಅಂತರಗಂಗಾ ಡೇ-ನಲ್ಮ್ ಕೇಂದ್ರ (ನಗರ ನಿರಾಶ್ರಿತರ ಆಶ್ರಯತಾಣ)ದಲ್ಲಿ ವಿಶ್ವ ವಸತಿರಹಿತರ ದಿನವನ್ನು ಆಚರಿಸಲಾಯಿತು.

ಸತತ ೦೬ ವರ್ಷಗಳಿಂದ ಅಂತರಗಂಗಾ ವಿದ್ಯಾ ಸಂಸ್ಥೆಯಲ್ಲಿ ವಸತಿ ರಹಿತರಿಗೆ ಆಶ್ರಯ ಕಲ್ಪಿಸಿದ್ದು, ಸೂಕ್ತ ಆರೈಕೆ, ಪಾಲನೆ, ಪೋಷಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಸಹಿಸುತ್ತಿದ್ದು, ಡೇ-ನಲ್ಮ್ ಯೋಜನೆ ಹೇಗೆ ಕಾರ್ಯರೂಪಕ್ಕೆ ಬಂತು ಎಂಬ ಹಿನ್ನಲೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ನಗರಸಭೆಯ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆ ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಮಿಷನ್ ಮ್ಯಾನೇಜರ್ ಗೋವಿಂದಮೂರ್ತಿ, ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ರಾಜೇಶ್ವರಿ, ಸಮುದಾಯ ಸಂಘಟಕಿ ಬೀಬಿ ಕುತೇಜಾ, ಅಂತರಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ.ಎಸ್ ಶಂಕರ್, ಸಿಇಓ ಪ್ರಜ್ಞಾ ಶಂಕರ್ ಸೇರಿದಂತೆ ಇತರೆ ಸಿಬ್ಬಂದಿ, ಸಂಸ್ಥೆಯ ಹಿರಿಯರು ಹಾಗೂ ನಿರಾಶ್ರಿತರು ಪಾಲ್ಗೊಂಡಿದ್ದರು.

ಚಿತ್ರ - ಕೋಲಾರದ ಅಂತರಗಂಗಾ ವಿದ್ಯಾಸಂಸ್ಥೆಯಲ್ಲಿ ವಿಶ್ವ ವಸತಿ ರಹಿತರ ದಿನ ಆಚರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande