ಕೋಲಾರದ ಗೋಲ್ಡ್ ಫೀಲ್ಡ್ ಸಹಕಾರ ಸಂಘದಲ್ಲಿ ಆಯುಧಪೂಜೆ
ಕೋಲಾರದ ಗೋಲ್ಡ್ ಫೀಲ್ಡ್ ಸಹಕಾರ ಸಂಘದಲ್ಲಿ ಆಯುಧಪೂಜೆ
ಕೋಲಾರದ ಗೋಲ್ಡ್ ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಘದಿAದ ಆಯುಧ ಪೂಜೆ ನಡೆಯಿತು.


ಕೋಲಾರದ ಗೋಲ್ಡ್ ಫೀಲ್ಡ್ ಸಹಕಾರ ಸಂಘದಲ್ಲಿ ಆಯುಧಪೂಜೆ

ಕೋಲಾರ / ೧೧ ಅಕ್ಟೋಬರ್ (ಹಿ.ಸ) : ದುರ್ಗಾಮಾತೆಯ ಆಶೀರ್ವಾದದಿಂದ ಜಿಲ್ಲೆಯಲ್ಲಿ ಮುನಿಸಿಕೊಂಡಿರುವ ವರುಣ ಕೃಪೆ ತೋರಲಿ, ರೈತರ ಬದುಕು ಹಸನಾಗಲಿ ಎಂದು ಗೋಲ್ಡ್ ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಪ್ರಾರ್ಥಿಸಿದರು.

ನಗರದ ಸೊಸೈಟಿಯಲ್ಲಿ ಆಯುಧಪೂಜೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೋಲಾರ ಜಿಲ್ಲೆಯಲ್ಲಿ ಬಿತ್ತನೆಗೂ ಮಳೆಯಿಲ್ಲದೇ ಸಂಕಷ್ಟ ಎದುರಾಗಿದೆ, ಕೆಲವು ಕಡೆ ಅಲ್ಪ ಸ್ವಲ್ಪ ಮಳೆಗೆ ರೈತರು ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆಯೂ ನೀರಿಲ್ಲದೇ ಒಣಗುತ್ತಿದ್ದು, ಒಂದೆರಡು ದಿನಗಳ ಹಿಂದೆಯಷ್ಟೆ ಸ್ವಲ್ಪ ಮಳೆಯಾಗಿದೆ ಎಂದ ಅವರು, ವರುಣದೇವ ಜಿಲ್ಲೆಯ ಕುರಿತು ಕೃಪೆ ತೋರುವಂತಾಗಲಿ ಆಯುಧಪೂಜೆ ರೈತರ ಬದುಕು ಉತ್ತಮವಾಗಲು ಕಾರಣವಾಗಲಿ ಎಂದು ಆಶಿಸಿದರು.

ಸೊಸೈಟಿ ೨೦ ಲಕ್ಷಬಂಡವಾಳದೊAದಿಗೆ ಆರಂಭವಾಗಿದ್ದು, ಕೇವಲ ನಾಲ್ಕು ವರ್ಷಗಳಲ್ಲೇ ೫.೬೮ ಕೋಟಿ ರೂ ದಾಖಲೆಯ ವಹಿವಾಟು ನಡೆಸಿದೆ, ಬಡ್ಡಿ ಮಾಫಿಯಾದಿಂದ ರೈತರನ್ನು ರಕ್ಷಿಸುವ ಸಾಮಾಜಿಕ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀರಾಮ್, ನಿರ್ದೇಶಕರಾದ ವೆಂಕಟರವಣಪ್ಪ, ನಾರಾಯಣಸ್ವಾಮಿ, ಲೋಕೇಶ್‌ಮೂರ್ತಿ, ಸುಬ್ಬಾರೆಡ್ಡಿ, ನಿವೃತ್ತ ಅಧಿಕಾರಿ ರಂಗಯ್ಯ, ಸಿಬ್ಬಂದಿ ನಾರಾಯಣಸ್ವಾಮಿ, ಹೆಚ್.ಎಂ.ವೆAಕಟರಾಮೇಗೌಡ,ಶಶಿಕಲಾ ಮತ್ತಿತರರಿದ್ದರು.

ಚಿತ್ರ : ಕೋಲಾರದ ಗೋಲ್ಡ್ ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಘದಿAದ ಆಯುಧ ಪೂಜೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande