ಕೋಲಾರ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಿತೃ ಪಕ್ಷದ ಅಂಗವಾಗಿ ಪೂರ್ವಜನರಿಗೆ ಪೂಜೆ ಸಲ್ಲಿಸುವಾಗ ಹೆಜ್ಜೇನು ದಾಳಿ ನಡೆಸಿ ಒಬ್ಬರು ಮೃತಪಟ್ಟಿದ್ದು ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ದುರಂತ ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿಯಲ್ಲಿ ಸಂಭವಿಸಿದೆ.
ಜಂಗಾಲಹಳ್ಳಿ ಗ್ರಾಮದಲ್ಲಿ ಪಿತೃಪಕ್ಷದ ಅಂಗವಾಗಿ ಪೂರ್ವಜರಿಗೆ ಪೂಜೆ ಸಲ್ಲಿಸುವಾಗ ಅಗರಬತ್ತಿ ಹೊಗೆ ತಗುಲಿ ಸಮೀಪದ ಮರದಲ್ಲಿದ್ದ ಹೆಜ್ಜೇನು ದಾಳಿ ಮಾಡಿವೆ. ಇದರಿಂದಾಗಿ ಪೂಜೆ ಮಾಡುತ್ತಿದ್ದ ಶಾಮಣ್ಣ, ಸುಂದರ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪ ಹಾಗೂ ವೆಂಕಟಸ್ವಾಮಿ ದಿಕ್ಕಾಪಾಲಾಗಿ ಓಡಿಹೋದರು. ಹೆಜ್ಜೇನು ದಾಳಿಯಿಂದ ತೀವ್ರವಾಗಿ ಅಸ್ವಸ್ಥಗೊಂಡವರನ್ನು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ೬೦ ವರ್ಷದ ವೆಂಕಟಸ್ವಾಮಿ ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಉಳಿದ ಗಾಯಾಳುಗಳು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರ - ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿಯಲ್ಲಿ ಹೆಜ್ಜೇನು ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೆಂಕಟಸ್ವಾಮಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್