ಸಾಧನೆಗೆ ಕೌಶಲ್ಯ, ಶೈಲಿ ಅತ್ಯಗತ್ಯ: ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ
ತುಮಕೂರು, 8ಜೂನ್ (ಹಿ.ಸ): ಆ್ಯಂಕರ್: ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿ ಇರುತ್ತದೆ. ಅದನ್ನು ಅವರು ತಮ್ಮ ಕೆಲ
ಜದಕ


ತುಮಕೂರು, 8ಜೂನ್ (ಹಿ.ಸ):

ಆ್ಯಂಕರ್:

ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿ ಇರುತ್ತದೆ. ಅದನ್ನು ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋದರೆ ಯಾವುದೇ ಸಮಸ್ಯೆಯಾದರೂ ಪರಿಹಾರವಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷಾö್ಮಣುಜೀವವಿಜ್ಞಾನ ವಿಭಾಗಗಳು ಆಯೋಜಿಸಿದ್ದ ನೂತನ ಕೌಶಲ ಕೋರ್ಸುಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಾವುದೇ ವಿಷಯವನ್ನು ಅವರ ಶೈಲಿ ಮತ್ತು ಕೌಶಲ್ಯಗಳಿಂದ ನಿರ್ವಹಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರತಿಯೊಬ್ಬರಲ್ಲೂ ಬದಲಾವಣೆ ಅತ್ಯಗತ್ಯ. ಬದಲಾವಣೆಯಿಂದ ಇಂದ ಮಾತ್ರ ಇನ್ನೂ ಹೆಚ್ಚು ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆಯ ಹಾದಿಯತ್ತ ಸಾಗಬೇಕು ಎಂದರು.

ಬೆAಗಳೂರಿನ ಕ್ಲಿನಿಸಿಡ್ ರಿಸರ್ಚ್ ಗ್ಲೋಬಲ್ ಸೊಲ್ಯೂಶನ್ಸ್ ಸಂಸ್ಥೆಯ ಸಿಇಒ ಸುಧಾ ರಾಜ್ ಮಾತನಾಡಿ, ಇಂದಿನ ಸಮಾಜದಲ್ಲಿ ಜ್ಞಾನದ ಅವಶ್ಯಕತೆ ಬಹಳ ಇದೆ. ವಿದ್ಯಾರ್ಥಿಗಳು ಗರಿಷ್ಠ ಜ್ಞಾನವನ್ನು ಪಡೆದುಕೊಳ್ಳಬೇಕು. ಸಿಕ್ಕಿರುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಯಾವುದೇ ವಿಷಯವನ್ನು ಸವಾಲಾಗಿ ತೆಗೆದುಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ಹಾಗೂ ಸೂಕ್ಷಾö್ಮಣುಜೀವವಿಜ್ಞಾನ ವಿಭಾಗದ ಸಂಯೋಜಕ ಡಾ. ಆರ್. ಜಿ. ಶರತ್ಚಂದ್ರ, ಜೀವರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೇವರಾಜ ಎಸ್. ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande